ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ರೈಲ್ವೆಗೆ ₹ 59 ಕೋಟಿ, ಉತ್ತರಕ್ಕೆ ₹ 13,200 ಕೋಟಿ: ಕನಿಮೋಳಿ ತರಾಟೆ

Last Updated 18 ಮಾರ್ಚ್ 2022, 5:15 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸಲು ದಕ್ಷಿಣ ರೈಲ್ವೆಗೆ ಕೇವಲ ₹ 59 ಕೋಟಿ ಮೀಸಲಿರಿಸಿ, ಉತ್ತರ ರೈಲ್ವೆಗೆ ₹ 13,200 ಕೋಟಿ ಕೊಟ್ಟಿರುವ ಬಗ್ಗೆ ತಮಿಳುನಾಡು ಸಂಸದೆ ಕನಿಮೋಳಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರದ ಅನುದಾನದಲ್ಲಿ ಈ ರೀತಿಯಅಸಮಾನತೆ ಮತ್ತು ವ್ಯತ್ಯಾಸ ಏಕೆ? ಎಂದು ಕೇಂದ್ರ ರೈಲ್ವೆ ಸಚಿವರನ್ನು ಬುಧವಾರ ಲೋಕಸಭೆಯಲ್ಲಿ ಡಿಎಂಕೆ ಸಂಸದೆ ಪ್ರಶ್ನಿಸಿದರು.

ಇದು 'ಏಕ ಭಾರತ' ಎಂದುಕೊಂಡಿದ್ದೇನೆ. ಏಕ ಭಾರತದ ಬಗ್ಗೆ ಆಗಾಗ ಹೇಳುತ್ತಲೇ ಇರುತ್ತೀರಿ. ರೈಲ್ವೆ ಕೂಡ ಏಕ ಭಾರತ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರವು ದಕ್ಷಿಣ ಭಾಗವನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನಿಮೋಳಿ ಅವರ ಭಾಷಣದ ವಿಡಿಯೊಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗುತ್ತಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರು ಹಿಂದಿಯಲ್ಲಿ ಉತ್ತರಿಸಲು ಮುಂದಾದಾಗ ಆಕ್ಷೇಪಿಸಿದ ಕನಿಮೋಳಿ, ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯಿಸುವಂತೆ ಕೋರಿದ ವಿಡಿಯೊ ಕೂಡ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT