ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಳು ಹೊಸ ರಕ್ಷಣಾ ಯೋಜನೆ ಖಾಸಗಿ ವಲಯಕ್ಕೆ ಮಂಜೂರು

Published 11 ಜುಲೈ 2024, 13:35 IST
Last Updated 11 ಜುಲೈ 2024, 13:35 IST
ಅಕ್ಷರ ಗಾತ್ರ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ನೀರಿನಡಿಯಿಂದ ಉಡಾವಣೆ ಮಾಡಬಹುದಾದ ಮಾನವರಹಿತ ವೈಮಾನಿಕ ವಾಹನಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ರಕ್ಷಣೆಗೆ ಸಂಬಂಧಿಸಿದ ಏಳು ಹೊಸ ಯೋಜನೆಗಳನ್ನು ಖಾಸಗಿ ವಲಯಕ್ಕೆ ನೀಡಿದೆ.

ರಕ್ಷಣೆಗೆ ಸಂಬಂಧಿಸಿದ ತಂತ್ರಜ್ಞಾನವನ್ನು ದೇಶದಲ್ಲೇ ಅಭಿವೃದ್ಧಿಪಡಿಸುವುದನ್ನು ಉತ್ತೇಜಿಸಲು ರಕ್ಷಣಾ ಸಚಿವಾಲಯದ ತಂತ್ರಜ್ಞಾನ ಅಭಿವೃದ್ಧಿ ನಿಧಿಯಡಿ ಈ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. 

ನೀರಿನಡಿಯಿಂದ ಉಡಾವಣೆ ಮಾಡುವ ಮಾನವರಹಿತ ವೈಮಾನಿಕ ವಾಹನಗಳು ಸಮುದ್ರದಲ್ಲಿ ಬಹುಮುಖ ಪಾತ್ರವನ್ನು ನಿಭಾಯಿಸಲಿದ್ದು, ಯುದ್ಧದ ವಿವಿಧ ಸನ್ನಿವೇಶಗಳಲ್ಲಿ ನಿಯೋಜಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯನ್ನು ಪುಣೆಯ ಸಾಗರ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ರೇಡಾರ್‌ ಸಿಗ್ನಲ್‌ ಪ್ರೊಸೆಸರ್‌, ವಿಮಾನಗಳಿಗಾಗಿ ಐಸ್‌ ಡಿಟೆಕ್ಶನ್‌ ಸೆನ್ಸರ್‌ಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನೀರೊಳಗಿನ ವಸ್ತುಗಳನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ನಾಶಪಡಿಸಲು ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಿಸುವ ವಾಹನಗಳ ಅಭಿವೃದ್ಧಿ ಯೋಜನೆಗಳೂ ಇದರಲ್ಲಿ ಸೇರಿವೆ.

‘ಆತ್ಮನಿರ್ಭರತೆಗೆ ಉತ್ತೇಜನ ನೀಡಲು ಡಿಆರ್‌ಡಿಒ ತನ್ನ ಏಳು ಹೊಸ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ಖಾಸಗಿಯವರಿಗೆ ನೀಡಿದೆ. ಸಶಸ್ತ್ರ ಪಡೆಗಳು, ಏರೋಸ್ಪೇಸ್‌ ಮತ್ತು ರಕ್ಷಣಾ ಕ್ಷೇತ್ರದ ವಿವಿಧ ಅವಶ್ಯಕತೆಗಳಿಗಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT