ನವದೆಹಲಿ: ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ನಿಯಮ–2019ಕ್ಕೆ (ಎನ್ಡಿಸಿಟಿ) ತಿದ್ದುಪಡಿ ತಂದು ಕೇಂದ್ರ ಆರೋಗ್ಯ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ನೂತನ ನಿಯಮಗಳ ಪ್ರಕಾರ, ಔಷಧ ತಯಾರಿಕಾ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದಲ್ಲಿ ಔಷಧ ಉತ್ಪಾದನೆಗೆ ಪರೀಕ್ಷಾ ಪರವಾನಗಿ ಪಡೆಯುವ ಅಗತ್ಯವಿಲ್ಲ. ಕೆಲವು ಪ್ರಕರಣಗಳನ್ನು ಹೊರತುಪಡಿಸಿ, ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ (ಸಿಡಿಎಸ್ಸಿಒ) ಆನ್ಲೈನ್ ಮೂಲಕವೇ ತಿಳಿಸಬಹುದು.

ಸೈಟೊಟಾಕ್ಸಿಕ್, ನಾರ್ಕೋಟಿಕ್, ಸೈಕೊಟ್ರೋಪಿಕ್ ಔಷಧಗಳು ಸೇರಿದಂತೆ ಅತ್ಯಂತ ಅಪಾಯಕಾರಿ ಔಷಧಗಳ ತಯಾರಿಕೆಗೆ ಪರೀಕ್ಷಾ ಪರವಾನಗಿ ಅಗತ್ಯವಿದೆ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ತಿದ್ದುಪಡಿಯನ್ನು ತರಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಈವರೆಗಿನ ನಿಯಮಗಳ ಪ್ರಕಾರ, ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶದ ಸಣ್ಣ ಪ್ರಮಾಣದ ಔಷಧ ಉತ್ಪಾದನೆಗೂ ಸಿಡಿಎಸ್ಸಿಒದಿಂದ ಪರೀಕ್ಷಾ ಪರವಾನಗಿ ಪಡೆಯಬೇಕಿತ್ತು. ಸದ್ಯ ಸಿಡಿಎಸ್ಸಿಒ ವಾರ್ಷಿಕ 30,000ದಿಂದ 35,000 ಪರೀಕ್ಷಾ ಪರವಾನಗಿಯನ್ನು ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.