ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿತ್ ಬಣವೇ ನಿಜವಾದ NCP; ಹೊಸ ಹೆಸರು ಸೂಚಿಸಲು ಶರದ್‌ಗೆ ಫೆ. 7ರ ಗಡುವು– EC

Published 6 ಫೆಬ್ರುವರಿ 2024, 14:33 IST
Last Updated 6 ಫೆಬ್ರುವರಿ 2024, 14:33 IST
ಅಕ್ಷರ ಗಾತ್ರ

ಮುಂಬೈ: ರಾಜ್ಯಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಶರದ್ ಪವಾರ್ ಬಣಕ್ಕೆ ಫೆ. 7ರೊಳಗೆ ಹೊಸ ಹೆಸರು ಸೂಚಿಸಲು ಚುನಾವಣಾ ಆಯೋಗವು ವಿಶೇಷ ಅವಕಾಶವನ್ನು ಮಂಗಳವಾರ ಕಲ್ಪಿಸಿದೆ.

ಆ ಮೂಲಕ ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದು ಚುನಾವಣಾ ಆಯೋಗ ಅಧಿಕೃತಗೊಳಿಸಿದೆ. ಇದು ಶರದ್ ಪವಾರ್ ಬಣಕ್ಕೆ ದೊಡ್ಡ ಹಿನ್ನೆಡೆಯಾಗಿದೆ ಎಂದೆನ್ನಲಾಗಿದೆ.

ಕಳೆದ ಜುಲೈ 2ರಂದು ಕಳೆದವರ್ಷ ಜುಲೈನಲ್ಲಿ ಎನ್‌ಸಿಪಿ ಇಬ್ಭಾಗವಾಯಿತು. ಪಕ್ಷದ ನಾಯಕ ಅಜಿತ್‌ ಪವಾರ್‌ ಮತ್ತು ಇತರ ಎಂಟು ಶಾಸಕರು ಏಕನಾಥ ಶಿಂದೆ ನೇತೃತ್ವದ ಸರ್ಕಾರವನ್ನು ಸೇರಿದರು. ಆಗಿನಿಂದಲೂ, ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಉಭಯ ಬಣಗಳು ಹಕ್ಕು ಮಂಡಿಸಿವೆ. ಜೊತೆಗೆ, ಎದುರಾಳಿ ಬಣಕ್ಕೆ ನಿಷ್ಠರಾಗಿರುವವರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದವು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿಯನ್ನು ಸದ್ಯ ಒಂದು ಬಣವಾಗಿ ಗುರುತಿಸಲಾಗುತ್ತಿದೆ. ಎನ್‌ಸಿಪಿ ಪಕ್ಷ ವಿಭಜನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳು ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗದಲ್ಲಿ ವಿಚಾರಣೆ ಹಂತದಲ್ಲಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT