ನವದೆಹಲಿ: ₹500 ಕೋಟಿ ವಂಚನೆ ಆರೋಪ ಎದುರಿಸುತ್ತಿರುವ ತಲೆಮರೆಸಿಕೊಂಡಿದ್ದ ಹರಿಯಾಣದ ಕಾಂಗ್ರೆಸ್ ಮಾಜಿ ಶಾಸಕ ಧರಂ ಸಿಂಗ್ ಚೋಕರ್ ಅವರನ್ನು ಜಾರಿ ನಿರ್ದೆಶನಾಲಯ ಬಂಧಿಸಿದೆ.

ಭಾನುವಾರ ದೆಹಲಿಯ ಹೋಟೆಲ್ವೊಂದರಲ್ಲಿ ಧರಂ ಸಿಂಗ್ ಅವರನ್ನು ಬಂಧಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಚೋಕರ್ ಪಾಣಿಪತ್ ಜಿಲ್ಲೆಯ ಸಮಲ್ಖಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು.

ಚೋಕರ್, ಅವರ ಮಕ್ಕಳಾದ ವಿಕಾಸ್ ಚೋಕರ್(ತಲೆಮರೆಸಿಕೊಂಡಿದ್ದಾರೆ) ಮತ್ತು ಸಿಕಂದರ್ ಚೋಕರ್ ಅವರು 1,500ಕ್ಕೂ ಹೆಚ್ಚು ಮನೆ ಖರೀದಿದಾರರಿಗೆ ವಂಚನೆ ಮಾಡಿದ ಮತ್ತು ಅವರಿಗೆ ₹500 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.

ಸಿಕಂದರ್ ಅವರನ್ನು ಕಳೆದ ವರ್ಷ ಇ.ಡಿ ಬಂಧಿಸಿತ್ತು. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯವು ಧರಂ ಸಿಂಗ್ ಚೋಕರ್ ಮತ್ತು ವಿಕಾಸ್ ಚೋಕರ್ ವಿರುದ್ಧ ಜಾಮೀನು ರಹಿತ ವಾರಂಟ್ ಅನ್ನು ಹೊರಡಿಸಿದೆ.

ಸಾಯಿ ಐನಾ ಫಾರ್ಮ್ಸ್ ಮತ್ತು ಸಂಬಂಧಿತ ಕಂಪನಿಗಳ ವಿರುದ್ಧ ಗುರುಗ್ರಾಮ ಪೊಲೀಸರು ದಾಖಲಿಸಿದ ಎಫ್ಐಆರ್ ಆಧರಿಸಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ ಪ್ರಕರಣ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.