ನವದೆಹಲಿ: ಬೆಂಗಳೂರು ಮೂಲದ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧದಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ, ಕಂಪನಿಯ ₹ 300 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
‘ಮಂತ್ರಿ ಸೆರೆನಿಟಿ, ಮಂತ್ರಿ ವೆಬ್‌ಸಿಟಿ ಹಾಗೂ ಮಂತ್ರಿ ಎನರ್ಜಿಯಾ ಎಂಬ ವಸತಿ ಯೋಜನೆಗಳಡಿ ಮನೆ ಖರೀದಿಸುವವರಿಗೆ ವಂಚಿಸಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ, ಕಂಪನಿಯ ಸ್ಥಿರಾಸ್ತಿಗಳ ಜಪ್ತಿಗಾಗಿ ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ’ ಎಂದು ಇ.ಡಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಂಪನಿಯ ಮುಖ್ಯ ಪ್ರವರ್ತಕ ಹಾಗೂ ನಿರ್ದೇಶಕ ಸುಶೀಲ್ ಪಿ.ಮಂತ್ರಿ ಅವರನ್ನು ಇ.ಡಿ ಕಳೆದ ಜೂನ್‌ನಲ್ಲಿ ಬಂಧಿಸಿತ್ತು.