ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

J&K: ರಿಲಯನ್ಸ್‌ ಇನ್ಸೂರೆನ್ಸ್‌ ಹಗರಣ | ₹ 36.57 ಕೋಟಿ ಮೌಲ್ಯದ ಆಸ್ತಿ ಜಪ್ತಿ

Published 18 ಜನವರಿ 2024, 15:37 IST
Last Updated 18 ಜನವರಿ 2024, 15:37 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ರಿಲಯನ್ಸ್‌ ಇನ್ಸೂರೆನ್ಸ್‌ ಹಗರಣಕ್ಕೆ ಸಂಬಂಧಿಸಿದಂತೆ ₹ 36.57 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ಜಪ್ತಿ ಮಾಡಿಕೊಂಡಿದ್ದಾರೆ.    

ಸಿಬಿಐ ದಾಖಲಿಸಿರುವ ಪ್ರಥಮ ತನಿಖಾ ವರದಿಯಲ್ಲಿ (ಎಫ್‌ಐಆರ್‌) ರಿಯಯನ್ಸ್‌ ಜನರಲ್ ಇನ್ಸೂರೆನ್ಸ್ ಮತ್ತು ಟ್ರಿನಿಟಿ ರಿಇನ್ಸೂರೆನ್ಸ್‌ನ ಮಧ್ಯವರ್ತಿಗಳನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿದೆ. ಸರ್ಕಾರಿ ನೌಕರರು, ಅವರ ಕುಟುಂಬ ಸದಸ್ಯರಿಗೆ ಜಾರಿಗೊಳಿಸಿದ್ದ ಆರೋಗ್ಯ ವಿಮಾ ಭದ್ರತೆಯ ಯೋಜನೆಗೆ ಸಂಬಂಧಿಸಿದ ಹಗರಣ ಇದಾಗಿದೆ.

ಹಿಂದಿನ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್‌, 2018ರಲ್ಲಿ ಅನಿಲ್‌ ಅಂಬಾನಿ ಮಾಲೀಕತ್ವದ ಕಂಪನಿ ಜೊತೆಗಿನ ಒಪ್ಪಂದವನ್ನು ರದ್ದುಪಡಿಸಿದ್ದರು. ಈ ಯೋಜನೆ ಜಾರಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕಾರಣ ನೀಡಲಾಗಿತ್ತು.

ನಿರ್ದಿಷ್ಟ ಕಂಪನಿಗೆ ನೆರವಾಗಲು ರಜೆ ದಿನ ಟೆಂಡರ್‌ ತೆರೆಯಲಾಗಿತ್ತು. ‘ಸಂಬಂಧಿಸಿದ ಕಡತಗಳಿಗೆ ಅನುಮೋದನೆ ನೀಡಲು ತಮಗೆ ₹300 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು‘ ಎಂದು ಮಲ್ಲಿಕ್‌ 2021ರ ಅಕ್ಟೋಬರ್‌ನಲ್ಲಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT