ದಾಖಲೆಗಳಲ್ಲಿ ಮಾತ್ರವೆ ವೈದ್ಯರ ನೇಮಕ
‘ವಿಶ್ವವಿದ್ಯಾಲಯವು ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ (ಎನ್‌ಎಂಸಿ) ಅನುಮೋದನೆ ಪಡೆಯಲು ‘ದಾಖಲೆ’ಗಳಲ್ಲಿ ಮಾತ್ರವೇ ವೈದ್ಯರನ್ನು ನೇಮಿಸಿಕೊಂಡಿತ್ತು. ಈ ವೈದ್ಯರು ನಿಯಮಿತವಾಗಿ ಕಾಲೇಜಿಗೆ ಹಾಜರಾಗಿ ತರಗತಿಗಳನ್ನೂ ತೆಗೆದುಕೊಳ್ಳಲಿಲ್ಲ ಮತ್ತು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆಯೂ ನೀಡಲಿಲ್ಲ’ ಎಂದು ಇ.ಡಿ ಹೇಳಿದೆ. ‘ಎನ್‌ಎಂಸಿ ತಪಾಸಣೆಯ ಸಮಯದಲ್ಲಿ ಹಲವಾರು ವೈದ್ಯರನ್ನು ತಾತ್ಕಾಲಿಕ ಆಧಾರದಲ್ಲಿ ನೇಮಿಸಲಾಗಿತ್ತು. ಎನ್‌ಎಂಸಿ ತಪಾಸಣೆಗೆ ಬರುವ ಮೂರು ವಾರಗಳ ಹಿಂದೆ ಆಸ್ಪತ್ರೆಯಲ್ಲಿ ಯಾವುದೇ ರೋಗಿಗಳು ಸಿಬ್ಬಂದಿ ಅಥವಾ ವೈದ್ಯರು ಇರಲಿಲ್ಲ ಮತ್ತು ಇಡೀ ಆಸ್ಪತ್ರೆ ಕಾರ್ಯನಿರತವಾಗಿರಲಿಲ್ಲ’ ಎಂದು .ಇಡಿ ಆರೋಪಿಸಿದೆ. 2025ರ ಜೂನ್‌ನಲ್ಲಿ ವೈದ್ಯಕೀಯ ಆಸ್ಪತ್ರೆ ಕಾಲೇಜಿನ ತಪಾಸಣೆಯ ವೇಳೆಯು ವಂಚನೆ ನಡೆದಿದ್ದು ಅದರ ನಂತರ ಕಾಲೇಜಿನ ಎಂಬಿಬಿಎಸ್‌ನ ಸೀಟುಗಳನ್ನು 150ರಿಂದ 200ಕ್ಕೆ ಹೆಚ್ಚಿಸಲು ಅನುಮತಿ ನೀಡಲಾಗಿತ್ತು.