ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 100 ಕೋಟಿ ಮೊತ್ತದ ಪೋಂಜಿ ಹಗರಣ: ನಟ ಪ್ರಕಾಶ್‌ ರಾಜ್‌ಗೆ ಇ.ಡಿ ಸಮನ್ಸ್‌

Published 23 ನವೆಂಬರ್ 2023, 13:57 IST
Last Updated 23 ನವೆಂಬರ್ 2023, 13:57 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಪ್ರಣವ್ ಜ್ಯುವೆಲರ್ಸ್‌ ಮೇಲೆ ದಾಖಲಿಸಿರುವ ದೂರಿನ ಮೇರೆಗೆ ವಿಚಾರಣೆಗೆ ಹಾಜರಾಗುವಂತೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರಿಗೆ, ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ಜಾರಿ ಮಾಡಿದೆ.

ಪ್ರಕಾಶ್‌ ರಾಜ್‌ ಅವರು ಈ ಜ್ಯುವೆಲರ್ಸ್‌ನ ಪ್ರಚಾರ ರಾಯಭಾರಿಯಾಗಿದ್ದಾರೆ. ಈ ಜ್ಯುವೆಲರ್ಸ್‌ ಚಿನ್ನದ ಮೇಲಿನ ಹೂಡಿಕೆ ಯೋಜನೆಯಡಿ ನೂರಾರು ಠೇವಣಿದಾರರಿಂದ ₹100 ಕೋಟಿಗೂ ಹೆಚ್ಚು ಮೊತ್ತ ಸಂಗ್ರಹಿಸಿದೆ. ಅಧಿಕ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಬಳಿಕ ವಂಚಿಸಿದ ಆರೋಪ ಇದರ ಮೇಲಿದೆ.

ಹಾಗಾಗಿ, ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಧಿಕಾರಿಗಳು ಪ್ರಕಾಶ್ ರಾಜ್‌ಗೆ ಸಮನ್ಸ್‌ ನೀಡಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆಯೇ ಹಾಗೂ ಜ್ಯುವೆಲರ್ಸ್‌ ಮಾಲೀಕರಿಂದ ಹಣ ಪಡೆದಿದ್ದಾರೆಯೇ ಎಂಬ ಬಗ್ಗೆ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಅವರ ಹೇಳಿಕೆಯನ್ನು ದಾಖಲಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಟೀಕಾಕಾರರಲ್ಲಿ ಒಬ್ಬರಾಗಿರುವ ಪ್ರಕಾಶ್‌ ರಾಜ್‌ ಅವರು, ಚೆನ್ನೈನಲ್ಲಿ ಮುಂದಿನ ವಾರ ತನಿಖಾ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. 

ದಾಳಿಯಲ್ಲಿ ಸಿಕ್ಕಿದ್ದು ಏನು?

ಪ್ರಣವ್ ಜ್ಯುವೆಲರ್ಸ್‌ ವಿರುದ್ಧ ಹೂಡಿಕೆದಾರರಿಗೆ ವಂಚಿಸಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ತಮಿಳುನಾಡು ಪೊಲೀಸ್‌ನ ಆರ್ಥಿಕ ಅಪರಾಧ ಘಟಕವು ಎಫ್‌ಐಆರ್‌ ದಾಖಲಿಸಿತ್ತು. ಇದರ ಆಧಾರದ ಮೇಲೆ ಇ.ಡಿ ಕೂಡ ಪ್ರಕರಣ ದಾಖಲಿಸಿತ್ತು.

ಸೋಮವಾರ ತಿರುಚಿರಾಪಳ್ಳಿಯಲ್ಲಿ ಇರುವ ಜ್ಯುವೆಲರ್ಸ್‌ ಅಂಗಡಿಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಸೂಕ್ತ ಆಧಾರವಿಲ್ಲದ ₹23.70 ಲಕ್ಷ ನಗದು ಹಾಗೂ 11.60 ಕೆ.ಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿತ್ತು.

ಹೂಡಿಕೆದಾರರಿಗೆ ಹಣ ವಾಪಸ್‌ ನೀಡಿಲ್ಲ. ಸಂಗ್ರಹಿಸಿದ ಹಣದಿಂದ ಚಿನ್ನದ ಗಟ್ಟಿ ಹಾಗೂ ಆಭರಣಗಳನ್ನು ಖರೀದಿಸುವ ಮೂಲಕ ವಂಚಿಸಲಾಗಿದೆ ಎಂದು ಇ.ಡಿ ಹೇಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT