ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಬಾರಿ ಎವರೆಸ್ಟ್‌ ಏರಿದ್ದ ಷೇರ್ಪಾ ನಾಪತ್ತೆ

ಕಾರಕೊರಂನಲ್ಲಿ ಕಣ್ಮರೆ
Last Updated 15 ಜುಲೈ 2018, 15:45 IST
ಅಕ್ಷರ ಗಾತ್ರ

ಡಾರ್ಜಿಲಿಂಗ್‌ : ಮೌಂಟ್ ಎವರೆಸ್ಟ್‌ನ್ನು 8 ಬಾರಿ ಏರಿದ್ದ ಪೆಂಬಾ ಷೇರ್ಪಾ ಅವರು ಶುಕ್ರವಾರ ಕಣ್ಮರೆಯಾಗಿದ್ದಾರೆ.ಕಾರಕೋರಂ ವ್ಯಾಪ್ತಿಯಲ್ಲಿರುವ7,672 ಅಡಿ ಎತ್ತರದ ಸಸೆರ್‌ ಕಾಂಗ್ರಿ ಶಿಖರವನ್ನು ಯಶಸ್ವಿಯಾಗಿ ಏರಿ ಹಿಂತಿರುಗಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಶುಕ್ರವಾರವೇ ಕಣ್ಮರೆಯಾಗಿದ್ದು, ಅವರು ಆಳವಾದ ಕೊರಕಲಿಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಜುಲೈ 13ರ ತನಕ ಅವರ ಜೊತೆ ಸಂಪರ್ಕದಲ್ಲಿದ್ದೆವು, ನಂತರ ಯಾವುದೇ ಮಾಹಿತಿ ಸಿಕ್ಕಿಲ್ಲ,ಅವರನ್ನು ಮತ್ತೆ ನೋಡಲಿದ್ದೇನೆ’ ಎಂದು ಪೆಂಬಾ ಪತ್ನಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ‘ಪೆಂಬಾ ನಾಪತ್ತೆಯಾಗಿರುವ ಕುರಿತಂತೆ ಇಂಡೊ ಟಿಬೇಟಿಯನ್‌ ಗಡಿ ಪೊಲೀಸರು ಸುದ್ದಿ ನೀಡಿದರು’ ಎಂದರು.

ಪೆಂಬಾ ಅವರು ನಾಪತ್ತೆಯಾದ ಸ್ಥಳದಲ್ಲಿ ಐಟಿಬಿಪಿ ತಂಡವೂ ಮರುದಿನ ಬೆಳಿಗ್ಗೆ ಹುಡುಕಾಟ ನಡೆಸಿದ್ದು, ಎಲ್ಲ ಬೆಳವಣಿಗೆ ಕುರಿತಂತೆ ಡಾರ್ಜಿಲಿಂಗ್‌ ಜಿಲ್ಲಾಡಳಿತವೂ ಸೂಕ್ಷ್ಮವಾಗಿ ಕಣ್ಣಿಟ್ಟಿದೆ.

‘ನಾವು ಪೆಂಬಾ ಬಗ್ಗೆ ಚಿಂತಿತರಾಗಿದ್ದೇವೆ,. ಅವರೊಬ್ಬ ನುರಿತ ವ್ಯಕ್ತಿ’ ಎಂದು ಸಿಲಿಗುರಿಯ ಹಿಮಾಲಯನ್‌ ನೇಚರ್‌ ಆ್ಯಂಡ್‌ ಅಡ್ವೆಂಚರ್‌ ಪೌಂಢೇಶನ್‌ನ ಮುಖ್ಯಸ್ಥ ಅನಿಮೇಶ್‌ ಬಸು ಅವರು ತಿಳಿಸಿದರು. ಜೂನ್‌ 20ರಂದುಕೋಲ್ಕತ್ತದಿಂದ ಬಂದ ಪರ್ವತಾರೋಹಿಗಳ ತಂಡದ ತಂಡದ ನೇತೃತ್ವವನ್ನು ಪೆಂಬಾ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT