ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಗೆ ಮತ್ತೆ ಏಕನಾಥ್ ಖಡ್ಸೆ; ಗಣೇಶೋತ್ಸವ ಬಳಿಕ ತೀರ್ಮಾನ

Published : 14 ಸೆಪ್ಟೆಂಬರ್ 2024, 15:23 IST
Last Updated : 14 ಸೆಪ್ಟೆಂಬರ್ 2024, 15:23 IST
ಫಾಲೋ ಮಾಡಿ
Comments

ಮುಂಬೈ: ಬಿಜೆಪಿಗೆ ಮರಳಲಿದ್ದಾರೆ ಎನ್ನಲಾಗಿದ್ದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏಕನಾಥ ಖಡ್ಸೆ, ಡಿಸಿಎಂ ದೇವೇಂದ್ರ ಫಡಣವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ರಾಜ್ಯಪಾಲರಾಗಿ ನೇಮಿಸುವ ಭರವಸೆಯನ್ನು ನನಗೆ ನೀಡಲಾಗಿತ್ತು’ ‌ಎಂದೂ ಹೇಳಿದ್ದಾರೆ. 

‘ಆದರೆ, ಈಗ ನಡೆಯುತ್ತಿರುವ ಗಣೇಶೋತ್ಸವ ಆಚರಣೆಗಳು ಮುಗಿದ ತರುವಾಯ ಪಕ್ಷ  ಈ ವಿಷಯವನ್ನು ಗಮನಿಸಲಿದೆ’ ಎಂದು  ಫಡಣವೀಸ್‌ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ನಾಗ್ಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಡಿಸಿಎಂ, ‘ಪ‍ಕ್ಷ ಕೈಗೊಳ್ಳುವ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಗಣೇಶೋತ್ಸವ ಆಚರಣೆ ಬಳಿಕವೇ ಈ ಬಗ್ಗೆ ತೀರ್ಮಾನಿಸಲಾಗುತ್ತದೆ’ ಎಂದು ಹೇಳಿದರು. 

72 ವರ್ಷ ವಯಸ್ಸಿನ ಖಡ್ಸೆ, ಒಬಿಸಿ ವರ್ಗದ ಲೆವಾ–ಪಾಟೀಲ ಸಮುದಾಯದವರು. ಉತ್ತರ ಮಹಾರಾಷ್ಟ್ರ–ಖಂಡೇಶ್‌ ವಲಯದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ.

ಫಡಣವೀಸ್‌, ಮುಖಂಡ ಗಿರೀಶ್ ಮಹಾಜನ್ ಜೊತೆಗಿನ ವೈಮನಸ್ಯದಿಂದಾಗಿ ಖಡ್ಸೆ ಅವರು, ಅಕ್ಟೋಬರ್ 2020ರಲ್ಲಿ ಬಿಜೆಪಿ ತೊರೆದಿದ್ದು, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದ್ದರು.

ಅನುಭವವನ್ನು ಆಧರಿಸಿ ಎನ್‌ಸಿಪಿ ಅವರನ್ನು ಪರಿಷತ್ ಸದಸ್ಯರಾಗಿಸಿತ್ತು. ಸದ್ಯ ಅವರು, ಎನ್‌ಸಿಪಿ ಶರದ್‌ ಬಣದ ಮುಖ್ಯಸ್ಥರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT