ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ; ಜುಲೈ 10ರಂದು ಮತದಾನ

Published 10 ಜೂನ್ 2024, 14:46 IST
Last Updated 10 ಜೂನ್ 2024, 14:46 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ 4 ವಿಧಾನಸಭಾ ಕ್ಷೇತ್ರ ಸೇರಿದಂತೆ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಸೋಮವಾರ ಉಪ ಚುನಾವಣೆ ದಿನಾಂಕ ಪ್ರಕಟಿಸಿದೆ. ಜುಲೈ 10ರಂದು ಮತದಾನ ನಡೆಯಲಿದೆ.

ಶಾಸಕರ ರಾಜೀನಾಮೆ ಹಾಗೂ ನಿಧನದಿಂದ ಈ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. 

ರೂಪೌಲಿ (ಬಿಹಾರ್‌), ರಾಯ್‌ಗಂಜ್‌, ರಣಘಾಟ್‌ ದಕ್ಷಿಣ್‌, ಬಗಡಾ, ಮಣಿಕತಲಾ (ಪಶ್ಚಿಮ ಬಂಗಾಳ) ವಿಕಾರವಂಡಿ (ತಮಿಳುನಾಡು) ಅಮರ್‌ವಾಡ (ಮಧ್ಯಪ್ರದೇಶ), ಬದ್ರಿನಾಥ ಹಾಗೂ ಮಂಗಲೌರ್‌ (ಉತ್ತರಾಖಂಡ) ಜಲಂಧರ್‌ ಪಶ್ಚಿಮ(ಪಂಜಾಬ್‌) ದೆಹ್ರಾ, ಹಮೀರ್‌ಪುರ, ನಾಲಾಘಡ ( ಹಿಮಾಚಲಪ್ರದೇಶ) ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಜೂನ್‌ 14ರಂದು ಆಯೋಗವು ಅಧಿಸೂಚನೆ ಹೊರಡಿಸಲಿದ್ದು, ಜೂನ್‌ 21ರಂದು ನಾಮಪತ್ರ ಸಲ್ಲಿಸಲು ಕಡೇ ದಿನ. 24ರಂದು ನಾಮಪತ್ರಗಳ ‍ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಜೂನ್‌ 26 ಕಡೆಯ ದಿನ. ಜುಲೈ 10ರಂದು ಮತದಾನ ನಡೆಯಲಿದ್ದು, ಜುಲೈ 13ರಂದು ಫಲಿತಾಂಶ ಪ್ರಕಟವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT