ನವದೆಹಲಿ: 2024–25ರ ಹಣಕಾಸು ವರ್ಷದಲ್ಲಿ 9 ಚುನಾವಣಾ ಟ್ರಸ್ಟ್ಗಳು ವಿತರಿಸಿರುವ ದೇಣಿಗೆಯಲ್ಲಿ ಸಿಂಹಪಾಲು ಬಿಜೆಪಿಗೆ ಸಿಕ್ಕಿದೆ.

ತಾವು ಸ್ವೀಕರಿಸಿದ ₹ 3,811.34 ಕೋಟಿ ದೇಣಿಗೆಯಲ್ಲಿ ಶೇ 82.45ರಷ್ಟನ್ನು, ಅಂದರೆ ₹3,142.65 ಕೋಟಿಯನ್ನು ಬಿಜೆಪಿಯೊಂದಕ್ಕೇ ವಿತರಣೆ ಮಾಡಿರುವುದಾಗಿ ಟ್ರಸ್ಟ್ಗಳು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿವೆ.

ದೇಶದಲ್ಲಿರುವ 19 ಚುನಾವಣಾ ಟ್ರಸ್ಟ್ಗಳ ಪೈಕಿ 13 ಮಾತ್ರವೇ ಆಯೋಗಕ್ಕೆ ವರದಿ ಸಲ್ಲಿಸಿವೆ. ಇವುಗಳಲ್ಲಿ ನಾಲ್ಕು, ಉಲ್ಲೇಖಿತ ಆರ್ಥಿಕ ವರ್ಷಗಳಲ್ಲಿ ಯಾವುದೇ ಪಕ್ಷಕ್ಕಾಗಿ ದೇಣಿಗೆ ಸ್ವೀಕರಿಸಿಲ್ಲ ಮತ್ತು ವಿತರಿಸಿಲ್ಲ ಎಂದು ಸ್ಪಷ್ಟಪಡಿಸಿವೆ.

ಇತರ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಸ್ವೀಕರಿಸಿದ ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸುವ ಏಕಮಾತ್ರ ಉದ್ದೇಶದಿಂದ ಕಂಪನಿಗಳು ಸ್ಥಾಪಿಸಿಕೊಂಡಿರುವ ಕಾರ್ಪೊರೇಟ್ ದೇಣಿಗೆ ವ್ಯವಸ್ಥೆಯೇ ಚುನಾವಣಾ ಟ್ರಸ್ಟ್ಗಳು. ಇವು, ಆರ್ಥಿಕ ವರ್ಷದಲ್ಲಿ ಸಂಗ್ರಹಿಸಿದ ದೇಣಿಗೆಯಲ್ಲಿ ಶೇ 95ರಷ್ಟನ್ನು ರಾಜಕೀಯ ಪಕ್ಷಗಳಿಗೆ ವಿತರಿಸುವುದು ಕಡ್ಡಾಯ.

ಈ ಟ್ರಸ್ಟ್ಗಳು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹಾಗೂ ಚುನಾವಣಾ ಆಯೋಗದ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ.

2024-25ರಲ್ಲಿ ಚುನಾವಣಾ ಟ್ರಸ್ಟ್ಗಳ ದೇಣಿಗೆ ಸಂಗ್ರಹ ಹಾಗೂ ವಿತರಣೆ

ಸ್ವೀಕರಿಸಿದ್ದು: ₹ 3,811.34 ಕೋಟಿ

ವಿತರಿಸಿದ್ದು : ₹ 3,811.34 ಕೋಟಿ

ಅತಿಹೆಚ್ಚು (₹ 2,668.49 ಕೋಟಿ) ದೇಣಿಗೆ ಸಂಗ್ರಹಿಸಿದ ಪ್ರುಡೆಂಟ್ ಚುನಾವಣಾ ಟ್ರಸ್ಟ್, ಬಿಜೆಪಿಗೆ ₹ 2,180.71 ಕೋಟಿ ಮತ್ತು ಕಾಂಗ್ರೆಸ್ಗೆ ₹ 21.63 ಕೋಟಿಯನ್ನು ವಿತರಿಸಿದೆ.

ನಂತರದ ಸ್ಥಾನದಲ್ಲಿರುವ ಪ್ರೋಗ್ರೆಸ್ಸಿವ್ ಚುನಾವಣಾ ಟ್ರಸ್ಟ್, ತಾನು ಸ್ವೀಕರಿಸಿದ ₹ 915 ಕೋಟಿಯಲ್ಲಿ ₹ 757.62 ಕೋಟಿಯನ್ನು ಬಿಜೆಪಿಗೆ ಹಾಗೂ ₹ 77.34 ಕೋಟಿಯನ್ನು ಕಾಂಗ್ರೆಸ್ಗೆ ನೀಡಿದೆ.

ಯಾವ ಪಕ್ಷಕ್ಕೆ ಎಷ್ಟು?

ಬಿಜೆಪಿ: ₹ 3,142.65 ಕೋಟಿ

ಕಾಂಗ್ರೆಸ್: ₹ 298.76 ಕೋಟಿ

ತೃಣಮೂಲ ಕಾಂಗ್ರೆಸ್: ₹ 102 ಕೋಟಿ

ವೈಎಸ್ಆರ್ ಕಾಂಗ್ರೆಸ್: ₹ 44 ಕೋಟಿ

ಭಾರತ ರಾಷ್ಟ್ರ ಸಮಿತಿ: ₹ 10 ಕೋಟಿ

ಬಿಜೆಡಿ: ₹ 15 ಕೋಟಿ

ಡಿಎಂಕೆ: ₹ 10 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.