ನವದೆಹಲಿ: ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದ್ದು, ಸೋಮವಾರ ವೇಳಾಪಟ್ಟಿ ಘೋಷಿಸುವ ಸಾಧ್ಯತೆ ಇದೆ.
.ಆಳ–ಅಗಲ | ಎಸ್ಐಆರ್: ಕಾನೂನು ಹೇಳುವುದೇನು?.
ಸೋಮವಾರ ಸಂಜೆ 4.45ಕ್ಕೆ ಸುದ್ದಿಗೋಷ್ಠಿ ಕರೆದಿರುವ ಆಯೋಗ, ಹಂತ ಹಂತವಾಗಿ ಎಸ್ಐಆರ್ ನಡೆಸುವ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.

ಚುನಾವಣೆ ಸಮೀಪಿಸುತ್ತಿರುವ ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶದಲ್ಲಿ ಮೊದಲ ಹಂತದ ಎಸ್ಐಆರ್ ನಡೆಯುವ ಮುನ್ಸೂಚನೆ ಇದೆ. ಜತೆಗೆ, ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 10–15 ರಾಜ್ಯಗಳಲ್ಲಿ ಸಮಗ್ರ ಪರಿಷ್ಕರಣೆ ನಡೆಯಲಿದೆ. ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ ಎಸ್ಐಆರ್ ನಡೆದಿತ್ತು.
.ದೇಶದಾದ್ಯಂತ ಎಸ್ಐಆರ್ಗೆ ಸಿದ್ಧತೆ: ಚುನಾವಣಾ ಆಯೋಗದ ಮಹತ್ವದ ಸಭೆ.
2026ರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಸುದ್ದಿಗೊಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಇರಲಿದ್ದಾರೆ.
.ವಿಶ್ಲೇಷಣೆ | ಎಸ್ಐಆರ್: ಲೋಪಗಳ ಕೂಪ.
ಬಿಹಾರದಲ್ಲಿ ಈಗಾಗಲೇ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ನ. 6 ಮತ್ತು 11 ರಂದು ಚುನಾವಣೆ ನಿಗದಿಯಾಗಿದೆ.
.ಸಂಪಾದಕೀಯ | ‘ಎಸ್ಐಆರ್’ ಪ್ರಕ್ರಿಯೆ ಮುಕ್ತಾಯ: ಬಿಹಾರದ ಅನುಭವ ಪಾಠವಾಗಲಿ.ಹಂತ ಹಂತವಾಗಿ SIR: 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯುವ ರಾಜ್ಯಗಳತ್ತ EC ಚಿತ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.