ನವದೆಹಲಿ: 2024-25ರ ಅವಧಿಯಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಅತ್ಯಧಿಕ ಹಣ ವ್ಯಯಿಸಿದೆ. ಈ ಅವಧಿಯಲ್ಲಿ ಬಿಜೆಪಿ ₹3,335.36 ಕೋಟಿ ಮತ್ತು ಕಾಂಗ್ರೆಸ್ ₹896.22 ಕೋಟಿ ವ್ಯಯಿಸಿದೆ. ಇದು ಕಾಂಗ್ರೆಸ್ಗಿಂತ 3.75 ಪಟ್ಟು ಹೆಚ್ಚಾಗಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.

2024-25ರಲ್ಲಿ ಲೋಕಸಭೆ ಮತ್ತು ಎಂಟು ರಾಜ್ಯಗಳ ವಿಧಾನಸಭೆಗೆ ಚುನಾವಣೆ, ಉಪಚುನಾವಣೆ ನಡೆದಾಗ ಬಿಜೆಪಿಯು ಒಟ್ಟು ₹6,769.14 ಕೋಟಿ ಸಂಗ್ರಹಿಸಿತ್ತು. ಈ ಪೈಕಿ ₹6,124.85 ಕೋಟಿ ದೇಣಿಗೆಯಾಗಿ ಸ್ವೀಕರಿಸಿತ್ತು.
.'ಮಹಾ ಜಂಗಲ್ ರಾಜ್' ಪರಿಸ್ಥಿತಿಯನ್ನು ಅಂತ್ಯಗೊಳಿಸಬೇಕು: ಮಮತಾಗೆ ಮೋದಿ ತಿರುಗೇಟು.ಅತ್ಯಾಚಾರಕ್ಕೆ ‘ಸೌಂದರ್ಯ’ ಹೋಲಿಕೆ ಮಾಡಿದ ‘ಕೈ’ MLA ವಜಾಗೊಳಿಸಲು ಬಿಜೆಪಿ ಆಗ್ರಹ.
ಇದರಲ್ಲಿ ₹3,335.36 ಚುನಾವಣಾ ವೆಚ್ಚ ಸೇರಿದಂತೆ ಒಟ್ಟು ₹3,774.58 ಕೋಟಿ ಖರ್ಚು ಮಾಡಿದೆ. ಉಳಿತಾಯ ₹2,994.56 ಕೋಟಿ ಆಗಿದೆ.

ಬಿಜೆಪಿಗೆ ಹೋಲಿಸಿದರೆ 2024-25ರಲ್ಲಿ ಕಾಂಗ್ರೆಸ್ ಆದಾಯ ₹918.28 ಕೋಟಿ ಆಗಿದ್ದರೆ ಒಟ್ಟು ಖರ್ಚು ₹1,111.94 ಕೋಟಿ ಆಗಿತ್ತು.

ಬಿಜೆಪಿ ಪಕ್ಷವು ಜಾಹೀರಾತಿಗಾಗಿ ₹897.42 ಕೋಟಿ, ನಾಯಕರ ಹೆಲಿಕಾಪ್ಟರ್ ಸಂಚಾರಕ್ಕಾಗಿ ₹583.08 ಕೋಟಿ ಮತ್ತು ಅಭ್ಯರ್ಥಿಗಳಿಗೆ ₹312.90 ಕೋಟಿ ಹಣಕಾಸಿನ ನೆರವನ್ನು ನೀಡಿದೆ.

ಬಿಜೆಪಿ ತನ್ನ ನೌಕರರಿಗೆ ಸಂಬಳ ರೂಪದಲ್ಲಿ ₹69.07 ಕೋಟಿ ಹಾಗೂ ನೌಕರರ ಕಲ್ಯಾಣ ಯೋಜನೆಗಳಿಗೆ ₹5.27 ಕೋಟಿ ಸೇರಿದಂತೆ ಒಟ್ಟು ₹74.34 ಕೋಟಿ ವ್ಯಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.