ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ‘ದೇಶ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತಿದೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ’ ಎಂದು ಶನಿವಾರ ಆರೋಪಿಸಿದರು.

‘ಸಾಂವಿಧಾನಿಕ ಸವಾಲುಗಳು: ದೃಷ್ಟಿಕೋನ ಮತ್ತು ಮಾರ್ಗಗಳು’ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಧಾನಿ ಅವರು ‘ಅಲ್ಪ ಬಹುಮತ’ದೊಂದಿಗೆ ಅಧಿಕಾರದಲ್ಲಿದ್ದಾರೆ. ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅವರು ಆ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂಬುದು ನೆನಪಿರಲಿ ಎಂದು ರಾಹುಲ್ ಆರೋಪಿಸಿದರು.
.‘ದೇಶದ ಚುನಾವಣಾ ವ್ಯವಸ್ಥೆ ವಿಶ್ವಕ್ಕೆ ಮಾದರಿ’.ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆ: ರಾಹುಲ್ ಗಾಂಧಿ.
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಅಲ್ಲಿ ಮತದಾರರ ಪಟ್ಟಿಯಲ್ಲಿದ್ದವರ ಭಾವಚಿತ್ರಗಳು ಮತ್ತು ಮತದಾರರನ್ನು ನಮ್ಮ ಪಕ್ಷದವರು ಪರಿಶೀಲಿಸಿದ್ದಾರೆ. ಅಲ್ಲಿ 1.5 ಲಕ್ಷ ಮತದಾರರು ‘ನಕಲಿ’ ಎಂಬುದು ಈ ವೇಳೆ ಗೊತ್ತಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ದತ್ತಾಂಶವನ್ನು ಬಿಡುಗಡೆಯಾದರೆ ಚುನಾವಣಾ ವ್ಯವಸ್ಥೆ ಬಗ್ಗೆ ಆಘಾತ ಮೂಡಿಸುತ್ತದೆ. ಆ ದಾಖಲೆಗಳನ್ನು ಅಕ್ಷರಷಃ ‘ಆಟಂ ಬಾಂಬ್’ ಎಂದರೆ ತಪ್ಪಾಗದು ಎಂದು ಅವರು ಪ್ರತಿಪಾದಿಸಿದರು.

‘ನಿಜ ಏನೆಂದರೆ ಭಾರತ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತಿದೆ. ಪ್ರಧಾನಿ ಅವರಂತೂ ಅತ್ಯಂತ ತೆಳುವಾದ ಬಹುಮತದ ಹೊಂದಿದ್ದಾರೆ. ಅದರಲ್ಲಿ 10–15 ಸೀಟುಗಳು ಈ ಅಕ್ರಮದ ಮೂಲಕ ಬಂದಿದ್ದು (ವಾಸ್ತವವಾಗಿ ಅದು 70ರಿಂದ 100 ಇರಬಹುದು ಎಂಬ ಶಂಕೆಯಿದೆ) ಎಂಬುದು ಸ್ಪಷ್ಟವಾದರೆ ಅವರು ಆ ಸ್ಥಾನದಲ್ಲಿ ಮುಂದುವರಿಯುವುದಿಲ್ಲ’ ಎಂದು ಅವರು ಪ್ರತಿಪಾದಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಹೇಗೆ ಅಕ್ರಮ ಎಸಗಲಾಗಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಎಳೆ ಎಳೆಯಾಗಿ ತೆರೆದಿಡುತ್ತೇವೆ’ ಎಂದು ಅವರು ವಿವರಿಸಿದರು.

‘ಈ ಅಕ್ರಮಗಳ ಬಗ್ಗೆ ನನ್ನ ಬಳಿ ಹಿಂದೆ ದಾಖಲೆಗಳು ಇರಲಿಲ್ಲ. ಆದರೆ ಈಗ ಶೇ 100ರಷ್ಟು ಪುರಾವೆಗಳಿದ್ದು, ಅತ್ಯಂತ ವಿಶ್ವಾಸದಿಂದ ಹೇಳುತ್ತಿದ್ದೇನೆ’ ಎಂದರು.

‘ಚುನಾವಣಾ ವ್ಯವಸ್ಥೆಯಲ್ಲಿ ಏನೋ ತಪ್ಪು ನಡೆಯುತ್ತಿದೆ ಎಂಬ ಸಂಶಯ 2014ರಿಂದಲೂ ಬಂದಿತ್ತು. ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲಿ ಗೆಲ್ಲದಿದ್ದಾಗಂತೂ ಆಶ್ಚರ್ಯವಾಗಿತ್ತು’ ಎಂದು ಅವರು ಹೇಳಿದರು.
.ಚುನಾವಣಾ ಬಾಂಡ್ ದೇಶದ ಇತಿಹಾಸದಲ್ಲೇ ದೊಡ್ಡ ಹಗರಣ: ಕಾಂಗ್ರೆಸ್.ಸಂಪಾದಕೀಯ: ಚುನಾವಣಾ ಬಾಂಡ್ ವ್ಯವಸ್ಥೆ ಸಲ್ಲ– ಇದು ಪ್ರಜಾತಂತ್ರಕ್ಕೆ ಅಪಾಯಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.