ಮೊರೆನಾ(ಮಧ್ಯಪ್ರದೇಶ): ಕುಟುಂಬದೊಳಗೆ ಮರುಮದುವೆಯಾಗಲು ನಿರಾಕರಿಸಿದ ವಿಧವೆ ಸೊಸೆಯನ್ನು ಮಾಜಿ ಸೇನಾಧಿಕಾರಿಯೊಬ್ಬರು ಗುಂಡಿಕ್ಕಿ ಕೊಂದಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಜ್ಞಾನ ಸಿಂಗ್ ಗುರ್ಜರ್ (65) ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಸೊಸೆ ಪ್ರಿಯಾಂಕಾ (38) ಅವರನ್ನು ನಾಡ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿ ದರ್ಶನ್ ಲಾಲ್ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.

ಮೊರೆನಾ ಜಿಲ್ಲಾ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕ್ರೋಡಾ ಕಾಲುವೆಯ ಬಳಿ ಶೂಟೌಟ್ ನಡೆದಿದ್ದು, ಸೊಸೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಅವರು ಹೇಳಿದ್ದಾರೆ.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಶುಕ್ಲಾ ಹೇಳಿದ್ದಾರೆ.

ಒಂದು ವರ್ಷದ ಹಿಂದೆ ಗಂಡನ ಮರಣದ ನಂತರ, ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ಅತ್ತೆಯ ಮನೆಗೆ ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಿಯಾಂಕಾ ಅವರ ಮಾವ ಗುರ್ಜರ್ ತನ್ನ ಅಣ್ಣನ ಮಗ ಧ್ರುವ್ ಜೊತೆ ಮರುಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು. ಆದರೆ, ಈ ಪ್ರಸ್ತಾಪ ಆಕೆಗೆ ಇಷ್ಟವಿರಲಿಲ್ಲ. ಈಗಾಗಲೇ ಮೂರು ಮಕ್ಕಳಿರುವುದರಿಂದ ನನ್ನ ಸಹೋದರಿ ಮದುವೆ ನಿರಾಕರಿಸಿದ್ದಳು. ಈ ವಿಷಯ ಜಗಳಕ್ಕೆ ಎಡೆಮಾಡಿತ್ತು ಎಂದು ಮೃತ ಮಹಿಳೆಯ ಸಹೋದರ ಮುಖೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.