ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳ ಕುರಿತು ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡಿಸಿದ್ದ ಭಾರತ ಮೂಲದ ಅಮೆರಿಕದ ಸಂಸದೆ ಪ್ರಮೀಳಾ ಜೈಪಾಲ್ ಅವರು ಇದ್ದ ಅಮೆರಿಕ ಸಂಸದರ ನಿಯೋಗದ ಜೊತೆಗಿನ ಸ

ಭೆಯನ್ನು ವಿದೇಶಾಂಗ ಸಚಿವ ಜೈಶಂಕರ್ ಅವರು ದಿಢೀರ್ ರದ್ದುಗೊಳಿಸಿದ್ದಾರೆ.

ಇದನ್ನೂ ಓದಿ:ಕಾಶ್ಮೀರದಲ್ಲಿನ ನಿರ್ಬಂಧ, ಬಂಧನಗಳನ್ನು ನಿಲ್ಲಿಸಿ: ಅಮೆರಿಕ ಸಂಸತ್‌ನಲ್ಲಿ ನಿರ್ಣಯ

ಪ್ರಮೀಳಾ ಜೈಪಾಲ್ ಅವರನ್ನು ನಿಯೋದಿಂದ ಹೊರಗಿಡಲು ತಿಳಿಸಿದ ಭಾರತದಪ್ರಸ್ತಾವವನ್ನು ಅಮೆರಿಕದ ಸಂಸದರ ನಿಯೋಗ ನಿರಾಕರಿಸಿತ್ತು. ಹೀಗಾಗಿ ಜೈಶಂಕರ್ ಅವರು ದೀಢರ್ ಸಭೆರ ರದ್ದು ಮಾಡಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ಜಾಲಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ಭಾರತ ಸರ್ಕಾರ ಕೂಡಲೇ ತೆರವುಗೊಳಿಸಬೇಕು, ಬಂಧನಕ್ಕೊಳಗಾಗಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು,’ ಎಂದು ಆಗ್ರಹಿಸಿ ಡೆಮಕ್ರಟಿಕ್ ಪಕ್ಷದ ಸಂಸದೆ ಪ್ರಮೀಳಾ ಜೈಪಾಲ್ ಅವರು ಅಮೆರಿಕ ಸಂಸತ್‌ನಲ್ಲಿ ಡಿ.6ರಂದು ಉಭಯಪಕ್ಷೀಯ ನಿರ್ಣಯವೊಂದನ್ನು ಮಂಡಿಸಿದ್ದರು.

ಇದನ್ನೂ ಓದಿ:ಭಾರತ ಮೂಲದ ಪ್ರಮೀಳಾ ಅಮೆರಿಕ ಕಾಂಗ್ರೆಸ್ಗೆ?

ಸಭೆ ರದ್ದುಗೊಳಿಸಿರುವ ಜೈಶಂಕರ್ ಅವರ ನಡೆಯ ಕುರಿತು ಅಲ್ಲಿನ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಮೀಳಾ ಜೈಪಾಲ್, ‘ಭಾರತದ ಸರ್ಕಾರ ಅಭಿಪ್ರಾಯ ಬೇಧಕ್ಕೆ ಮನ್ನಣೆ ನೀಡುವುದಿಲ್ಲ ಎಂಬುದಕ್ಕೆ ಈ ಬೆಳಣಿಗೆಯೂ ಸಾಕ್ಷಿಯಾಗಿದೆ. ಈ ಕ್ಷಣಕ್ಕೆ ಚರ್ಚೆ ಮುಖ್ಯವಾಗಬೇಗಿತ್ತು. ತಂಡದಲ್ಲಿ ಯಾರಿದ್ದಾರೆ, ಯಾರಿಲ್ಲ ಎಂಬುದಲ್ಲ. ಇದು ಸಣ್ಣತನ,‘ ಎಂದು ಅವರು ಹೇಳಿಕೊಂಡಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಜೈಶಂಕರ್ ಅವರು ಟ್ರಂಪ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಈಗಾಗಲೇ ಸಭೆ ನಡೆಸಿದ್ದಾರೆ. ಪ್ರಮೀಳಾ ಜೈಪಾಲ್ ಅವರನ್ನೂ ಒಳಗೊಂಡ ಅಮೆರಿಕ ಕಾಂಗ್ರೆಸ್‌ನ ಕೆಲ ಸಂಸದರೊಂದಿಗೆ ಈ ಮೊದಲೇ ಸಭೆ ನಿಗದಿಯೂ ಆಗಿತ್ತು. ಆದರೆ, ಸದ್ಯ ಪ್ರಮೀಳಾ ಅವರ ಕಾರಣಕ್ಕೆ ಜೈಶಂಕರ್ ಅವರು ಸಭೆ ರದ್ದು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.