ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೋಬ್ಬರಿ ₹1.26 ಕೋಟಿಗೆ ಗಣೇಶ ಲಡ್ಡು ಹರಾಜು!

Published 28 ಸೆಪ್ಟೆಂಬರ್ 2023, 10:55 IST
Last Updated 28 ಸೆಪ್ಟೆಂಬರ್ 2023, 11:00 IST
ಅಕ್ಷರ ಗಾತ್ರ

ಹೈದರಾಬಾದ್‌: ಜನಪ್ರಿಯ ಬಂಡ್ಲಗುಡ ಗಣೇಶ ಲಡ್ಡು ಈ ಬಾರಿ ಬರೋಬ್ಬರಿ ₹1.26 ಕೋಟಿಗೆ ಹರಾಜಾಗಿದೆ. ಈ ಮೂಲಕ ಅತಿ ದುಬಾರಿ ಲಡ್ಡು ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. 

ಸೆ.28ರಂದು ರಿಚ್‌ಮಂಡ್‌ ವಿಲ್ಲಾಸ್‌ನಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ಕೀರ್ತಿ ರಿಚ್‌ಮಂಡ್‌ ವಿಲ್ಲಾಸ್‌ನ ನಿವಾಸಿಗಳೇ ಲಡ್ಡುವನ್ನು ಖರೀದಿ ಮಾಡಿದ್ದಾರೆ.

ಕಳೆದ ವರ್ಷದ ಹರಾಜಿನಲ್ಲಿ ಬಂಡ್ಲಗುಡ ಲಡ್ಡು ₹60.08 ಲಕ್ಷಕ್ಕೆ ಮಾರಾಟವಾಗಿತ್ತು. ಈ ಬಾರಿ ದುಪ್ಪಟ್ಟು ಬೆಲೆಗೆ ಹರಾಜಾಗಿದೆ. ಈ ಲಡ್ಡು 12 ಕೆ.ಜಿ ಇರುತ್ತದೆ.

ಇದರ ಜೊತೆಗೆ ಪ್ರಸಿದ್ಧ ಬಾಲಾಪುರದ (ತೆಲಂಗಾಣ) ಗಣಪತಿ ಲಡ್ಡು ಕೂಡ ₹27 ಲಕ್ಷಕ್ಕೆ ಮಾರಾಟವಾಗಿದೆ. ಇದು 21 ಕೆ.ಜಿಯ ಲಡ್ಡುವಾಗಿದೆ. ಇದನ್ನು ದಸರಿ ದಯಾನಂದ ರೆಡ್ಡಿ ಎನ್ನುವವರು ಖರೀದಿ ಮಾಡಿದ್ದಾರೆ.

ಈ ಮೂಲಕ ಎರಡೂ ಪ್ರದೇಶದ ಲಡ್ಡು ಹರಾಜು ಗಮನಾರ್ಹ ದಾಖಲೆಗಳನ್ನು ನಿರ್ಮಿಸಿವೆ. 

ಪ್ರತಿ ವರ್ಷ ಗಣೇಶ ಚತುರ್ಥಿಯ ಪ್ರಯುಕ್ತ ರಿಚ್‌ಮಂಡ್‌ ವಿಲ್ಲಾಸ್‌ ನಿವಾಸಿಗಳು ಗಣಪತಿಯ ಕೈನಲ್ಲಿ ಇರಿಸಿದ್ದ ಲಡ್ಡುವಿನ ಹರಾಜು ಪ್ರಕ್ರಿಯೆ ನಡೆಸುತ್ತಾರೆ. 1994ರಿಂದ ಈ ಪದ್ದತಿ ಜಾರಿಯಲ್ಲಿದೆ. ಹರಾಜಿನಿಂದ ಬಂದ ಹಣವನ್ನು ಗಣೇಶ ಉತ್ಸವ ಸಮಿತಿಯು ವಿವಿಧ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳಿಗೆ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT