ಗುರುಗ್ರಾಮ: 25 ವರ್ಷದ ಫ್ಯಾಶನ್ ಡಿಸೈನರ್ ಒಬ್ಬರು 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಹರಿಯಾಣದ ಗುರುಗ್ರಾಮ–ಫರಿದಾಬಾದ್ ರಸ್ತೆ ಬಳಿ ನಡೆದಿದೆ.

ಮೃತ ಫ್ಯಾಶನ್ ಡಿಸೈನರ್ ಅನ್ನು ಕರ್ನಾಲ್ ಜಿಲ್ಲೆಯ ಚಾರು ಖುರಾನಾ ಎಂದು ಗುರುತಿಸಲಾಗಿದೆ.

ಚಾರು ಖುರಾನಾ ಉದ್ಯೋಗ ಅರಸಿ ಗುರಗ್ರಾಮಕ್ಕೆ ಬಂದಿದ್ದರು. ಗ್ವಾಲ್ ಪಹಾರಿ ವ್ಯಾಲಿ ವೀವ್ ಎಸ್ಟೇಟ್‌ನ ಫ್ಲಾಟ್ ಬಾಡಿಗೆ ಪಡೆದು ಒಂದೂವರೆ ತಿಂಗಳಿನಿಂದ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಫ್ಲಾಟ್‌ನಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಹಿಳೆಯೊಬ್ಬರು ಮಹಡಿ ಬಾಲ್ಕನಿಯಿಂದ ಬಿದ್ದು ಸಾವಿಗೀಡಾಗಿರುವ ಬಗ್ಗೆ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಈ ಮೊದಲೇ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

‘ಮೃತ ಮಹಿಳೆಯ ಸಂಬಂಧಿಕರು ಇಂದು ಬೆಳಿಗ್ಗೆ ಗುರುಗ್ರಾಮಕ್ಕೆ ಭೇಟಿ ನೀಡಿದ್ದು, ಅವರು ಯಾರ ಮೇಲೂ ಸಂಶಯ ವ್ಯಕ್ತಪಡಿಸಿಲ್ಲ. ಮೇಲಾಗಿ, ಮೃತದೇಹದ ಬಳಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಹಾಗಾಗಿ, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮೃತದೇಹ ಒಪ್ಪಿಸಲಾಗಿದೆ’ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.