ನವದೆಹಲಿ: ದೆಹಲಿ ವಿಧಾನಸಭೆಯ ‘ಫಾಸಿ ಘರ್’ (ಮರಣದಂಡನೆ ಕೊಠಡಿ) ವಿವಾದ ಕುರಿತು ನವೆಂಬರ್ 13ರಂದು ಸದನದ ಹಕ್ಕು ಬಾಧ್ಯತಾ ಸಮಿತಿ ಮುಂದೆ ಖುದ್ದು ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಎಎಪಿ ಆಡಳಿತಾವಧಿಯಲ್ಲಿ ಸಭಾಧ್ಯಕ್ಷರಾಗಿದ್ದ ರಾಮ್ ನಿವಾಸ್ ಗೋಯಲ್ ಅವರಿಗೆ ನೋಟಿಸ್ ನೀಡಲಾಗಿದೆ.

ವಿಧಾನಸಭಾ ಭವನದಲ್ಲಿ ಬ್ರಿಟಿಷರ ಕಾಲದಿಂದಲೂ ‘ಉಪಹಾರ ಕೊಠಡಿ’ ಎಂದು ಕರೆಯಲಾಗುತ್ತಿದ್ದ ಕೊಠಡಿಯನ್ನು 2022ರಲ್ಲಿ ಎಎಪಿ ಸರ್ಕಾರ ಇದ್ದಾಗ ‘ಫಾಸಿ ಘರ್’ ಹೆಸರಿನಲ್ಲಿ ನವೀಕರಣ ಮಾಡಿ ಉದ್ಘಾಟಿಸಲಾಗಿತ್ತು. ಅರವಿಂದ ಕೇಜ್ರಿವಾಲ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2025ರ ಆಗಸ್ಟ್ನಲ್ಲಿ ವಿಧಾನ ಸಭಾಧ್ಯಕ್ಷ ವಿಜೇಂದರ್ ಗುಪ್ತಾ ಅವರು, ‘1912ರ ವಿಧಾನಸಭೆ ಕಟ್ಟಡದ ನಕ್ಷೆ ತೋರಿಸಿ, ಈ ಸ್ಥಳವನ್ನು ಮರಣದಂಡನೆಗಾಗಿ ಬಳಸಿದ್ದಕ್ಕೆ ಯಾವುದೇ ದಾಖಲೆಗಳು ಮತ್ತು ಸಾಕ್ಷ್ಯಗಳಿಲ್ಲ’ ಎಂದು ತಿಳಿಸಿದ್ದರು. ಫಾಸಿ ಘರ್ ವಿಚಾರವನ್ನು ಸದನದ 9 ಸದಸ್ಯರ ಹಕ್ಕುಬಾಧ್ಯತಾ ಸಮಿತಿಗೆ ವಹಿಸಿ,ಪರಿಶೀಲನಾ ವರದಿ ಸಲ್ಲಿಸಲು ಸೂಚಿಸಿದ್ದರು.

ಹಕ್ಕು ಬಾಧ್ಯತಾ ಸಮಿತಿ ನವೆಂಬರ್ 13ರಂದು ಸಭೆ ಸೇರಲಿದ್ದು, ಅಂದು ಖುದ್ದು ಹಾಜರಾಗಿ ಪ್ರತಿಕ್ರಿಯೆ ನೀಡುವಂತೆ ಸಂಬಂಧಿಸಿದವರಿಗೆ ಮಂಗಳವಾರ ನೋಟಿಸ್ ರವಾನಿಸಲಾಗಿದೆ ಎಂದು ವಿಧಾನಸಭೆ ಕಾರ್ಯಾಲಯ ಮಾಹಿತಿ ನೀಡಿದೆ.

ಬಿಜೆಪಿ ಶಾಸಕ ಪ್ರದ್ಯುಮ್ನ ಸಿಂಗ್ ರಜಪೂತ್ ನೇತೃತ್ವದ 9 ಸದಸ್ಯರ ಸಮಿತಿಗೆ ಎಎಪಿಯ ಇಬ್ಬರು ಶಾಸಕರೂ ಸದಸ್ಯರಾಗಿದ್ದಾರೆ.

ಐತಿಹಾಸಿಕ ವಿಚಾರದಲ್ಲಿ ಸದನವನ್ನು ತಪ್ಪು ದಾರಿಗೆ ಎಳೆದಿದ್ದಕ್ಕೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.