ನವದೆಹಲಿ: ವಿಮಾನಯಾನಕ್ಕೆ ತೊಡಕಾಗುವಂತೆ ಹುಸಿ ಬಾಂಬ್ ಕರೆ ಪ್ರಕರಣದಲ್ಲಿ, ಆರೋಪ ಸಾಬೀತಾದಲ್ಲಿ ₹ 1 ಕೋಟಿವರೆಗೂ ದಂಡ ವಿಧಿಸಲು ಅವಕಾಶ ಇರುವಂತೆ ಕೇಂದ್ರ ಸರ್ಕಾರ ನಿಯಮಗಳಿಗೆ ತಿದ್ದುಪಡಿ ತಂದಿದೆ.

ವಿಮಾನಯಾನ (ಸುರಕ್ಷತಾ) ನಿಯಮ 2023ಕ್ಕೆ ತರಲಾಗಿರುವ ತಿದ್ದುಪಡಿ ಕುರಿತು ಕೇಂದ್ರ ಸರ್ಕಾರ ಭಾನುವಾರ ಅಧಿಸೂಚನೆ ಹೊರಡಿಸಿದೆ. ಇತ್ತೀಚೆಗೆ ವಿಮಾನಗಳಿಗೆ ಬಂದಿದ್ದ ಸರಣಿ ಹುಸಿ ಬಾಂಬ್ ಕರೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ತಪ್ಪು ಮಾಹಿತಿ ನೀಡುವುದು ಎಂಬುದನ್ನು ವಿಮಾನಯಾನ ಸುರಕ್ಷತೆ ಮತ್ತು ಭದ್ರತೆ ಅಸ್ತವ್ಯಸ್ತಗೊಳಿಸುವಿಕೆ ಅಥವಾ ವಿಮಾನನಿಲ್ದಾಣದಲ್ಲಿ ಗೊಂದಲ ಮೂಡಿಸುವುದು ಎಂದು ತಿದ್ದುಪಡಿ ತರಲಾಗಿದೆ.

ಪ್ರಯಾಣಿಕರು, ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಮೂಡಿವುದು, ವಿಮಾನಯಾನಕ್ಕೆ ತೊಡಕು ಉಂಟು ಮಾಡುವ ಪ್ರಕರಣಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಅಧಿಸೂಚನೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.