ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ವಿರುದ್ದ ಎಫ್ ಐಆರ್

Last Updated 27 ಫೆಬ್ರುವರಿ 2020, 5:37 IST
ಅಕ್ಷರ ಗಾತ್ರ

ಬಿಹಾರ: 2014ರಲ್ಲಿ ಮೋದಿ ಗೆಲುವಿಗೆ ಶ್ರಮಿಸಿ ಈಗ ಹೊರಬಂದಿರುವ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ವಿರುದ್ಧ ಕೃತಿ ಚೌರ್ಯ ಆರೋಪದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.

ಶಾಶ್ವತ್ ಗೌತಮ್ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿ, ನನ್ನ 'ಬಿಹಾರ್ ಕಿ ಬಾತ್' ಕಾರ್ಯಕ್ರಮವನ್ನು ಪ್ರಶಾಂತ್ ಯಥಾವತ್ತಾಗಿ ಕಾಪಿ ಮಾಡಿ 'ಬಾತ್ ಕಿ ಬಿಹಾರ್' ಎಂದು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯಿಂದ ಹೊರಬಿದ್ದು ನಂತರ ಬಿಹಾರದ ನಿತೀಶ್ ಕುಮಾರ್ ನೇತೃತ್ವದಜನತಾದಳ (ಸಂಯುಕ್ತ) ಪಕ್ಷ ಸೇರಿದ್ದರು. ಮುಖ್ಯಮಂತ್ರಿ ನಿತೀಶ್ ಅವರನ್ನು ನೇರವಾಗಿಯೇ ಟೀಕಿಸಲು ಆರಂಭಿಸಿದ್ದಪ್ರಶಾಂತ್ ಅವರು ಆ ಪಕ್ಷದಿಂದಲೂ ವಜಾಗೊಂಡಿದ್ದರು.ಬಳಿಕ 'ಬಾತ್ ಬಿಹಾರ್ ಕಿ' ಎಂಬ ಕಾರ್ಯಕ್ರಮದ ಮೂಲಕ 10 -15 ವರ್ಷಗಳಲ್ಲಿ ಬಿಹಾರವನ್ನು ಅತ್ಯಂತ ಮುಂದುವರಿದ ರಾಜ್ಯಗಳ ಸ್ಥಾನಕ್ಕೆ ತರುವುದೇ ನನ್ನ ಗುರಿ ಇದಕ್ಕಾಗಿ ಯುವಕರು, ವಿದ್ಯಾವಂತ ಯುವಕರು ಕೈಜೋಡಿಸಬೇಕೆಂದು ಪ್ರಚಾರ ನಡೆಸಿದ್ದರು.

ಶಾಶ್ವತ್ ಗೌತಮ್ ಎಂಬುವರು ತಮ್ಮದೂರಿನಲ್ಲಿ, ಒಸಾಮ ಎಂಬಾತ ನನ್ನ ಸ್ನೇಹಿತನಾಗಿದ್ದ, ಆತ ಕೆಲ ವರ್ಷಗಳ ಹಿಂದೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆತನಿಗೆ ನಾನೇಈ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದ್ದೆ. ಈಗ ಒಸಾಮಾ ಪ್ರಶಾಂತ್ ಕಿಶೋರ್‌‍‌ಗೆ ಈ ಕಾರ್ಯಕ್ರಮದ ಮೂಲವನ್ನು ನಕಲು ಮಾಡಿ ಕೊಟ್ಟಿದ್ದಾನೆ. ಆತನ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಶಾಶ್ವತ್ ಗೌತಮ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಮೆರಿಕಾದಲ್ಲಿ ವ್ಯಾಸಂಗ ಮಾಡಿ ಬಿಹಾರಕ್ಕೆ ಹಿಂದಿರುಗಿದ್ದಾರೆ. 2012ರಲ್ಲಿ ಅಮೆರಿಕಾದಲ್ಲಿಯೂ ವಿದ್ಯಾರ್ಥಿಗಳ ಚುನಾವಣೆಗೆ ಸ್ಪರ್ಧಿಸಿದ್ದು, ಅಲ್ಲಿಯೂ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಗೌತಮ್ ಪೊಲೀಸ್ ಠಾಣೆಗೆ ಸಾಕ್ಷಿಗಳನ್ನೂನೀಡಿದ್ದಾರೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT