ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ | ಪೆಟ್‌ ಶಾಪ್‌ನಲ್ಲಿ ಬೆಂಕಿ: 100 ಪಕ್ಷಿ, ಮೊಲ, ಮೀನು ಸಾವು

₹2.5 ಲಕ್ಷ ನಷ್ಟ
Published 26 ಮೇ 2024, 13:12 IST
Last Updated 26 ಮೇ 2024, 13:12 IST
ಅಕ್ಷರ ಗಾತ್ರ

ತಿರುವನಂತಪುರ: ಸಾಕು ಪ್ರಾಣಿಗಳ ಮಾರಾಟ ಮಳಿಗೆಯೊಂದರಲ್ಲಿ (ಪೆಟ್ ಶಾಪ್‌) ಸಂಭವಿಸಿದ ಅಗ್ನಿಅವಘಡದಲ್ಲಿ ಸುಮಾರು 100 ಪಕ್ಷಿಗಳು, ಮೊಲಗಳು ಹಾಗೂ ಮೀನುಗಳು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. 

ಶಿಬಿನ್‌ ಎಂಬುವವರಿಗೆ ಸೇರಿದ ಮಳಿಗೆಯಲ್ಲಿ ಮುಂಜಾನೆ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ ಬಳಿಕ ಕೆಲ ಪ್ರಾಣಿಗಳನ್ನು ರಕ್ಷಿಸಲಾಗಿದೆ. 

ಅತಿಯಾದ ಹೊಗೆಯಿಂದ ಅಂಗಡಿ ಪಕ್ಕದ ನಿವಾಸಿಗಳ ಉಸಿರಾಟಕ್ಕೆ ತೊಂದರೆಯಾಗಿತ್ತು. ಅವರು ಕೂಡಲೇ ಅಗ್ನಿಶಾಮಕ ದಳ ಮತ್ತು ಪೆಟ್‌ ಶಾಪ್‌ ಮಾಲೀಕರಿಗೆ ಮಾಹಿತಿ ನೀಡಿದರು. 

100 ಪಕ್ಷಿಗಳು, ಕೆಲ ಮೀನು ಮತ್ತು ಮೊಲಗಳು ಸಾವಿಗೀಡಾಗಿದ್ದು, ಶಾಪ್‌ನಲ್ಲಿದ್ದ ಅನೇಕ ಪರಿಕರಗಳು ನಾಶವಾಗಿವೆ. ₹2.5 ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದೆ ಎಂದು ಶಿಬಿನ್‌ ತಿಳಿಸಿದ್ದಾರೆ. 

ಘಟನೆಯ ಹಿಂದೆ ಕೆಲವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಶಿಬಿನ್‌ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT