ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ದುರ್ಗ್‌–ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ

Published 9 ಜೂನ್ 2023, 2:54 IST
Last Updated 9 ಜೂನ್ 2023, 2:54 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ದುರ್ಗ್‌–ಪುರಿ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಭಯಭೀತರಾಗಿದ್ದರು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ.

ಗುರುವಾರ ಸಂಜೆ ಖರಿಯಾರ್‌ ರಸ್ತೆ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲಿನ B3 ಕೋಚ್‌ನಲ್ಲಿ ಹೊಗೆ ಪತ್ತೆಯಾಗಿದೆ. ‘ಘರ್ಷಣೆ ಮತ್ತು ಬ್ರೇಕ್‌ಗಳ ಅಪೂರ್ಣ ಬಿಡುಗಡೆಯಿಂದಾಗಿ ಬ್ರೇಕ್‌ ಪ್ಯಾಡ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯು ಬ್ರೇಕ್‌ ಪ್ಯಾಡ್‌ಗಳಿಗೆ ಸೀಮಿತವಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೆ ಹೇಳಿದೆ.

ಘಟನೆಯಿಂದಾಗಿ ಪ್ರಯಾಣಿಕರು ಭಯಗೊಂಡಿದ್ದು, ಹೆಚ್ಚಿನವರು ರೈಲಿನಿಂದ ಹೊರಬಂದರು. ಒಂದು ಗಂಟೆಯೊಳಗೆ ಸಮಸ್ಯೆಯನ್ನು ಸರಿಪಡಿಸಲಾಯಿತು ಮತ್ತು ರೈಲು ರಾತ್ರಿ 11 ಗಂಟೆಗೆ ನಿಲ್ದಾಣದಿಂದ ಹೊರಟಿತು ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ.

ಒಡಿಶಾದ ಬಾಲೇಶ್ವರ ಜಿಲ್ಲೆಯ ಬಹನಾಗಾ ಬಜಾರ್‌ ನಿಲ್ದಾಣದಲ್ಲಿ ಬೆಂಗಳೂರು–ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌, ಶಾಲಿಮಾರ್–ಚೆನ್ನೈ ಸೆಂಟ್ರಲ್‌ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಸರಕು ರೈಲುಗಳ ನಡುವೆ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ 288 ಜನರು ಮೃತಪಟ್ಟಿದ್ದು, 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಭೀಕರ ರೈಲು ದುರಂತದ ನೆನಪುಗಳು ಮಾಸುವ ಮುನ್ನವೆ ಈ ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT