ಶ್ರೀನಗರ: ಮನೆಯಲ್ಲಿಯೇ ಉಸಿರುಗಟ್ಟಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಂಭವಿಸಿದೆ.

ಬಾರಾಮುಲ್ಲಾ ಜಿಲ್ಲೆಯ ಊರಿಯಿಂದ ಬಂದಿದ್ದ ದಂಪತಿ ಹಾಗೂ ಅವರ ಮೂವರು ಮಕ್ಕಳು ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಭಾರಿ ಚಳಿಯಿಂದ ಈ ಐವರು ಶುಕ್ರವಾರ ಅಥವಾ ಶನಿವಾರವೇ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅಕ್ಕ–ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಮೃತರ ಗುರುತು ತಿಳಿದು ಬಂದಿಲ್ಲ.

ಜಮ್ಮು– ಕಾಶ್ಮೀರ ಕಣಿವೆ ಕಳೆದ 40 ದಿನಗಳಿಂದ ಭಾರಿ ಚಳಿಗೆ ತುತ್ತಾಗಿದೆ. ಎಲ್ಲೆಡೆ ಹಿಮ ಆವರಿಸುತ್ತಿದೆ. ಜನ ಮನೆಯಿಂದ ಹೊರ ಬರುತ್ತಿಲ್ಲ. ಇನ್ನೂ ಕೆಲ ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎನ್ನಲಾಗಿದೆ.

ಮೃತರ ನಿಧನಕ್ಕೆ ಮುಖ್ಯಮಂತ್ರಿ ಓಮರ್ ಅಬ್ದುಲ್, ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂತಾಪ ಸೂಚಿಸಿದ್ದಾರೆ.
.ಮೈಕೊರೆಯುವ ಚಳಿ: ದಿನವಿಡೀ ಶೀತಗಾಳಿ.VIDEO | ಮೈ ಕೊರೆಯುವ ಚಳಿ ಲೆಕ್ಕಿಸದೆ ಗಣರಾಜ್ಯೋತ್ಸವ ತಾಲೀಮು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.