ಅಂಬಾಲಾ: ಫ್ರಾನ್ಸ್‌ನಿಂದ ತರಲಾಗಿರುವ ಐದು ರಫೇಲ್ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆಗೆ ಗುರುವಾರ ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು.

ಗಡಿ ವಿಷಯವಾಗಿ ಚೀನಾದೊಂದಿಗೆ ಸಂಘರ್ಷ ಏರ್ಪಟ್ಟಿರುವ ಈ ಸಂದರ್ಭದಲ್ಲಿಯೇ ಇವುಗಳ ಸೇರ್ಪಡೆಯಾಗಿದ್ದು

ಇಲ್ಲಿರುವ ವಾಯುನೆಲೆಯಲ್ಲಿ ಯುದ್ಧವಿಮಾನಗಳ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಸರ್ವಧರ್ಮ ಪೂಜೆ ಹಾಗೂ ಜಲಫಿರಂಗಿಗಳಿಂದ ಗೌರವ ಸಮರ್ಪಣೆ ನಂತರ ಈ ಯುದ್ಧವಿಮಾನಗಳ ಸಾಮರ್ಥ್ಯ ಪ್ರದರ್ಶನವೂ ನಡೆಯಿತು.

ವಾಯುಪಡೆಯ 17 ಸ್ಕ್ಯಾಡ್ರನ್‌ಗೆ ಈ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಿದ ಘಳಿಗೆಗೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್, ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ಹಾಗೂ ಇತರರು ಸಾಕ್ಷಿಯಾದರು.

ದೇಶೀಯವಾಗಿ ನಿರ್ಮಿಸಲಾಗಿರುವ ಯುದ್ಧವಿಮಾನ ತೇಜಸ್ ಹಾಗೂ ಹೆಲಿಕಾಪ್ಟರ್ ಸಾರಂಗ್‌ಗಳಿಂದ ಬಾನಂಗಳದಲ್ಲಿ ನಡೆದ ಕಸರತ್ತು ಪ್ರದರ್ಶನ ಗಮನ ಸೆಳೆಯಿತು.

ಅತ್ಯಾಧುನಿಕ ರಫೇಲ್ ಯುದ್ಧವಿಮಾನಗಳನ್ನು ಫ್ರಾನ್ಸ್‌ನ ಡಾಸೊ ಏವಿಯೇಷನ್ ಕಂಪನಿ ನಿರ್ಮಿಸಿದ್ದು, ನಿಖರ ದಾಳಿ ಮಾಡುವ ಇವುಗಳ ಸಾಮರ್ಥ್ಯ ಸಾಬೀತಾಗಿದೆ.

₹ 59,000 ಕೋಟಿ ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದವಾಗಿ ನಾಲ್ಕು ವರ್ಷಗಳಾಗಿದ್ದರೂ, ಮೊದಲ ಬ್ಯಾಚ್‌ನ ಐದು ಯುದ್ಧವಿಮಾನಗಳನ್ನು ಕಳೆದ ಜನವರಿಯಲ್ಲಿ ಭಾರತಕ್ಕೆ ತರಲಾಗಿತ್ತು.

ಎರಡನೇ ಹಂತದಲ್ಲಿ ನಾಲ್ಕು ಅಥವಾ ಐದು ರಫೇಲ್ ಯುದ್ಧವಿಮಾನಗಳು ನವೆಂಬರ್‌ನಲ್ಲಿ ಹಸ್ತಾಂತರಗೊಳ್ಳುವ ನಿರೀಕ್ಷೆ ಇದೆ.ಮುಂದಿನ ವರ್ಷದ ಅಂತ್ಯಕ್ಕೆ ಎಲ್ಲಾ ಯುದ್ಧವಿಮಾನಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ:

Watch | ವಾಯುಪಡೆಗೆ ರಫೇಲ್: ಅಂಬಾಲಾ ವಾಯುನೆಲೆಯಲ್ಲಿ ಯುದ್ಧ ವಿಮಾನಗಳ ಹಾರಾಟ
ಭಾರತ-ಫ್ರಾನ್ಸ್ ನಡುವಿನ ಗಟ್ಟಿ ಸಂಬಂಧ ಪ್ರತಿನಿಧಿಸುವ ರಫೇಲ್: ರಾಜನಾಥ್ ಸಿಂಗ್
ವಾಯುಪಡೆಗೆ ರಫೇಲ್: ಫ್ರೆಂಚ್ ರಕ್ಷಣಾ ಸಚಿವೆಯೊಂದಿಗೆ ರಾಜನಾಥ್ ಸಿಂಗ್ ಮಾತುಕತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.