ಕೊಟ್ಟಾಯಂ(ಕೇರಳ): ಮೊದಲ ವರ್ಷದ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿದ ಆರೋಪದ ಕಾರಣ ಮೂರನೇ ವರ್ಷದ ಐವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಕರಣ ನಡೆದಿದೆ.

ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ, ಅವರ ಮರ್ಮಾಂಗಗಳಿಗೆ ‘ಡಂಬಲ್’ಗಳನ್ನು ನೇತುಬಿಟ್ಟಿದ್ದರು. ರೇಖಾಗಣಿತದಲ್ಲಿ ಬಳಸುವ ಕೈವಾರದಿಂದ ಚುಚ್ಚಿ ಗಾಯಗಳನ್ನು ಮಾಡಿ, ಆ ಗಾಯಗಳಿಗೆ ಉರಿ ತರಿಸುವ ಕ್ರೀಮ್ ಹಚ್ಚಲಾಗಿತ್ತು. ನೋವಿನಿಂದ ಚೀರಿಕೊಂಡಾಗ, ಬಾಯಿಗೂ ಬಲವಂತವಾಗಿ ಕ್ರೀಮ್ ಹಚ್ಚಿದ್ದರು ಎಂದು ದೂರು ನೀಡಿದ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಭಾನುವಾರಗಳಂದು ಮದ್ಯ ಖರೀದಿಸಲು ಜೂನಿಯರ್ ವಿದ್ಯಾರ್ಥಿಗಳನ್ನು ಹೆದರಿಸಿ, ಹಣ ವಸೂಲು ಮಾಡಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಟ್ಟಾಯಂ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.