ಐಜ್ವಾಲ್: ಮಿಜೋರಾಂ ರಾಜ್ಯದಲ್ಲಿ ಮಂಗಳವಾರ 1,157 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುವ ಮೂಲಕ ಗರಿಷ್ಠ ಏಕದಿನ ಸಂಖ್ಯೆಗಳನ್ನು ದಾಖಲಿಸಿದೆ. ಈ ಮೂಲಕ ರಾಜ್ಯದ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 59,119 ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2011ರ ಜನಗಣತಿಯನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ ರಾಜ್ಯದಲ್ಲಿ 1,000 ಜನಸಂಖ್ಯೆಗೆ ಕನಿಷ್ಠ 45 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.

2011ರ ಜನಗಣತಿಯ ಪ್ರಕಾರ, ಮಿಜೋರಾಂನ ಜನಸಂಖ್ಯೆ 10.97 ಲಕ್ಷ.

ಹೊಸ ಸೋಂಕಿತರ ಪೈಕಿ 219 ಮಕ್ಕಳು (ಶೇ .18.92) ಸೇರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಜ್ಯದಲ್ಲಿ ದಾಖಲಾಗಿರುವ ಹೊಸ ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚು( 679 ಹೊಸ ಪ್ರಕರಣಗಳು) ಐಜ್ವಾಲ್ ಜಿಲ್ಲೆಯಿಂದ ವರದಿಯಾಗಿವೆ.

24 ಗಂಟೆಗಳಲ್ಲಿ 13,040 ಮಾದರಿಗಳನ್ನು ಪರೀಕ್ಷಿಸಿದ ನಂತರ 1,157 ಹೊಸ ಪ್ರಕರಣಗಳು ಪತ್ತೆಯಾಗಿರುವುದರಿಂದ ಪಾಸಿಟಿವ್ ದರವು ಶೇಕಡಾ 8.32 ರಷ್ಟಾಗಿದೆ ಎಂದು ಅವರು ಹೇಳಿದರು.

ಹೆಚ್ಚಿನ ಹೊಸ ಪ್ರಕರಣಗಳು ಫ್ಲೋರೊಸೆಂಟ್ ಇಮ್ಯುನೊಸ್ಸೇ ಪರೀಕ್ಷೆ(ಶೇ 28.60)ಗಳ ಮೂಲಕ ಪತ್ತೆಯಾಗಿವೆ. ಕೆಲವು ಪ್ರಕರಣಗಳು ಆರ್ಟಿ-ಪಿಸಿಆರ್ ಪರೀಕ್ಷೆಗಳು (ಶೇ 11.89), ಟ್ರೂನಾಟ್ ಪರೀಕ್ಷೆಗಳು(ಶೇ 18.37) ಮತ್ತು ಕ್ಷಿಪ್ರ ಪ್ರತಿಜನಕ ಪರೀಕ್ಷೆ (ಶೇ 7.97) ಮೂಲಕ ಪತ್ತೆಯಾಗಿವೆ.

ರಾಜ್ಯದಲ್ಲಿ ಪ್ರಸ್ತುತ 9,107 ಸಕ್ರಿಯ ಪ್ರಕರಣಗಳಿವೆ. ಸೋಮವಾರ 358 ಮಂದಿ ಸೇರಿದಂತೆ 49,798 ಜನರು ಚೇತರಿಸಿಕೊಂಡಿದ್ದಾರೆ.

ಇದುವರೆಗೆ ಕನಿಷ್ಠ 214 ಜನರು ಸೋಂಕಿಗೆ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.