ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದರಿಯರ ಅತ್ಯಾಚಾರ, ಕೊಲೆ: ನಾಲ್ವರು ಆರೋಪಿಗಳು ದೋಷಿ

Published 11 ಆಗಸ್ಟ್ 2023, 18:47 IST
Last Updated 11 ಆಗಸ್ಟ್ 2023, 18:47 IST
ಅಕ್ಷರ ಗಾತ್ರ

ಲಖಿಂಪುರ ಖೇರಿ (ಉತ್ತರಪ್ರದೇಶ) (ಪಿಟಿಐ): ವರ್ಷದ ಹಿಂದೆ ಇಲ್ಲಿ ನಡೆದ ದಲಿತ ಸಹೋದರಿಯರ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ಪೈಕಿ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಶುಕ್ರವಾರ ಇಲ್ಲಿನ ‘ಪೋಕ್ಸೊ’ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ ಎಂದು ಸರ್ಕಾರದ ಪರ ವಕೀಲ ತಿಳಿಸಿದ್ದಾರೆ. 

ನಾಲ್ವರು ಅಪರಾಧಿಗಳ ಶಿಕ್ಷೆಯ ವಿಚಾರಣೆಯನ್ನು ಆಗಸ್ಟ್ 14ರಂದು ನಡೆಸಲಾಗುವುದು ಎಂದೂ ನ್ಯಾಯಾಲಯವು ತಿಳಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಬ್ರಿಜೇಶ್ ಪಾಂಡೆ ತಿಳಿಸಿದ್ದಾರೆ. 

ನಿಘಾಸಾನ್ ಪ್ರದೇಶದ ಹಳ್ಳಿಯೊಂದರಲ್ಲಿ 2022ರ ಸೆ. 14ರಂದು ಅಪ್ರಾಪ್ತ ವಯಸ್ಸಿನ ಇಬ್ಬರು ದಲಿತ ಸಹೋದರಿಯರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಮರಕ್ಕೆ ನೇಣುಹಾಕಿ ಹತ್ಯೆ ಮಾಡಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT