ನವದೆಹಲಿ: ಖಾದ್ಯ ಪದಾರ್ಥಗಳ ಪೊಟ್ಟಣಗಳ ಮೇಲೆ ‘ಶೇ 100ರಷ್ಟು’ ಎಂಬ ಪದ ಬಳಸಬಾರದು. ಈ ರೀತಿಯ ಪದ ಬಳಕೆಯು ಗ್ರಾಹಕರ ದಾರಿ ತಪ್ಪಿಸಬಹುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಸಲಹೆ ನೀಡಿದೆ.

ಅಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಲೇಬಲ್ ಅಂಟಿಸುವಾಗ, ಪ್ಯಾಕಿಂಗ್ ಮತ್ತು ಪ್ರಚಾರ ಕಾರ್ಯದ ವಿಷಯ ವಸ್ತುಗಳಲ್ಲಿ ಈ ಪದವನ್ನು (ಶೇ 100) ಬಳಸದಂತೆ ಆಹಾರ ವ್ಯಾಪಾರ ನಿರ್ವಹಣೆಗಾರರಿಗೆ (ಎಫ್ಬಿಒ) ಪ್ರಾಧಿಕಾರವು ಗುರುವಾರ ಸೂಚನೆ ನೀಡಿದೆ.

ಇಂತಹ ಪದ ಬಳಕೆಯು ಗ್ರಾಹಕರಲ್ಲಿ ಗೊಂದಲ ಮೂಡಿಸುವ ಜೊತೆಗೆ, ಆಹಾರ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿ ಜಾರಿಯಲ್ಲಿರುವ ಅವಕಾಶಗಳ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು ಎಂದೂ ಹೇಳಿದೆ.

ಆಹಾರ ಪದಾರ್ಥಗಳ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳಡಿ ‘ಶೇ 100’ ಪದವನ್ನು ವ್ಯಾಖ್ಯಾನಿಸಲಾಗಿಲ್ಲ ಹಾಗೂ ಇದು ಗ್ರಾಹಕರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಯೇ ಹೆಚ್ಚು ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.