ನವದೆಹಲಿ: ಹೋಟೆಲ್‌ಗಳ ತಿಂಡಿಪಟ್ಟಿಯಲ್ಲಿರುವ ಆಹಾರಗಳ ಜತೆಗೆ ಅವುಗಳು ಹೊಂದಿರುವ ಕ್ಯಾಲರಿಯ ಮಾಹಿತಿಯನ್ನೂ ಒದಗಿಸುವುದನ್ನು ಕಡ್ಡಾಯ ಮಾಡಲು ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ (ಎಫ್‌ಎಸ್‌ಎಸ್ಎಐ) ಸಿದ್ಧತೆ ನಡೆಸಿದೆ.

ಈ ಸಂಬಂಧ ಪ್ರಾಧಿಕಾರವು ಈಗಾಗಲೇ ಕರಡು ನಿಯಮಾವಳಿಗಳನ್ನು ರಚಿಸಿದೆ. ಕರಡನ್ನು ಸಾರ್ವಜನಿಕರ ಆಕ್ಷೇಪಣೆಗೆ ಬಿಡುಗಡೆ ಮಾಡಿದೆ.

ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಫುಡ್ ಜಾಂಯ್ಟ್‌ಗಳ ತಿಂಡಿಪಟ್ಟಿಯಲ್ಲಿ ಕ್ಯಾಲರಿಯ ಮಾಹಿತಿಯನ್ನು ಪ್ರಕಟಿಸಬೇಕು. ಹೋಟೆಲ್‌ಗಳ ಜಾಲತಾಣಗಳಲ್ಲಿಯೂ ಈ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಕರಡು ನಿಯಮಾವಳಿಗಳಲ್ಲಿ ವಿವರಿಸಲಾಗಿದೆ.

ಒಬ್ಬ ವಯಸ್ಕ ಮನುಷ್ಯನಿಗೆ ದಿನವೊಂದರಲ್ಲಿ ಕನಿಷ್ಠ 2,000 ಕ್ಯಾಲರಿಯಷ್ಟು ಆಹಾರ ಬೇಕಾಗುತ್ತದೆ. ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಿದರೆ 2,000 ಕ್ಯಾಲರಿ ಆಗುತ್ತದೆ ಎಂಬ ವಿವರವನ್ನೂ ತಿಂಡಿಪಟ್ಟಿಯಲ್ಲಿ ನಮೂದಿಸಬೇಕು. ಆಹಾರದಲ್ಲಿರುವ ಜಿಡ್ಡಿನ ಪ್ರಮಾಣ, ವಿವಿಧ ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ, ಸಸ್ಯಹಾರ–ಮಾಂಸಾಹಾರಗಳನ್ನು ಸೂಚಿಸುವ ಚಿಹ್ನೆಗಳನ್ನೂ ಪ್ರಕಟಿಸಬೇಕು ಎಂದು ಪ್ರಾಧಿಕಾರವು ಹೇಳಿದೆ.

ಈ ನಿಯಮಾವಳಿಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಅವಕಾಶವಿದೆ. ಆನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ ನಿಯಮಾವಳಿಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.