ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾನಿಕ ಶಕ್ತಿಯ ಪರಿಣಾಮಕಾರಿ ಬಳಕೆಗೆ ಬೇಕು ರಾಜಕೀಯ ಇಚ್ಛಾಶಕ್ತಿ: ವಿ.ಆರ್. ಚೌಧರಿ

Published 27 ಮಾರ್ಚ್ 2024, 14:20 IST
Last Updated 27 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ವೈಮಾನಿಕ ಶಕ್ತಿಯನ್ನು ಶತ್ರುವಿನ ಗಡಿಯೊಳಗೆ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದು ಎಂಬುದು ಬಾಲಾಕೋಟ್ ಮಾದರಿಯ ಕಾರ್ಯಾಚರಣೆಗಳು ತೋರಿಸಿಕೊಟ್ಟಿವೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಹೇಳಿದ್ದಾರೆ.

‘ಭವಿಷ್ಯದ ಸಂಘರ್ಷಗಳಲ್ಲಿ ವೈಮಾನಿಕ ಶಕ್ತಿ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಮಿಲಿಟರಿ ಕಾರ್ಯತಂತ್ರಗಳಲ್ಲಿ ಹೆಚ್ಚಿನ ಪ್ರಯೋಜನ ಹೊಂದಲು ಬೇರೆ ಬೇರೆ ದೇಶಗಳು ಬಾಹ್ಯಾಕಾಶ ನೆಲೆಗಳನ್ನು (ASSETS) ನೆಚ್ಚಿಕೊಳ್ಳುತ್ತಿವೆ, ‘ಬಾಹ್ಯಾಕಾಶದ ಮಿಲಿಟರೀಕರಣ ಮತ್ತು ಸಶಸ್ತ್ರೀಕರಣವು ಅನಿವಾರ್ಯ ವಾಸ್ತವವಾಗಿದೆ’ ಎಂದು ಹೇಳಿದ್ದಾರೆ.

‘ವೈಮಾನಿಕ ಶಕ್ತಿಯು ರಾಷ್ಟ್ರದ ಶಕ್ತಿಯ ಪ್ರಮುಖ ಭಾಗ, ಇದು ಅತ್ಯಂತ ಮಹತ್ವದ ‍ಪಾತ್ರವನ್ನು ನಿರ್ವಹಿಸುವುದರಲ್ಲಿ ಅನುಮಾನ ಇಲ್ಲ. ಅಲ್ಲದೆ, ಇದು ರಾಷ್ಟ್ರದ ಶಕ್ತಿಯ ದ್ಯೋತಕವಾಗಿ, ಶಾಂತಿ ಮತ್ತು ಸಹಕಾರದ ಸಾಧನವಾಗಿ ನೆರವಿಗೆ ಬರುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ವೈಮಾನಿಕ ಶಕ್ತಿಯನ್ನು ಶತ್ರುವಿನ ಗಡಿಯೊಳಕ್ಕೂ ಪರಿಣಾಮಕಾರಿಯಾಗಿ ಬಳಸಬಹುದು. ಯುದ್ಧವೂ ಅಲ್ಲದ, ಶಾಂತಿಕಾಲವೂ ಅಲ್ಲದ ಪರಿಸ್ಥಿತಿಯಲ್ಲಿ, ಅಣ್ವಸ್ತ್ರ ಬಳಕೆಯಾಗುವ ಅಪಾಯದ ಅಡಿಯಲ್ಲಿ, ಸಂಘರ್ಷದ ತೀವ್ರತೆಯನ್ನು ಹೆಚ್ಚುಮಾಡದೆಯೇ ಈ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದನ್ನು ಬಾಲಾಕೋಟ್ ಮಾದರಿಯ ಕಾರ್ಯಾಚರಣೆಗಳು ತೋರಿಸಿವೆ’ ಎಂದು ಹೇಳಿದ್ದಾರೆ. 

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಇರುವ ಜೈಷ್–ಎ–ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ತರಬೇತಿ ಶಿಬಿರದ ಮೇಲೆ 2019ರ ಫೆಬ್ರುವರಿಯಲ್ಲಿ ದಾಳಿ ನಡೆಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT