ಅಹಮದಾಬಾದ್: ಗೋಧ್ರಾ ಗಲಭೆ ಬಳಿಕ ನಿರ್ಲಕ್ಷ್ಯದ ಆರೋಪದ ಮೇಲೆ ಒಂಬತ್ತು ಮಂದಿ ರೈಲ್ವೆ ಪೊಲೀಸರನ್ನು ಕೆಲಸದಿಂದ ವಜಾ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ.

ಈ ಒಂಬತ್ತು ಮಂದಿ ಚಲಿಸುವ ರೈಲಿನಲ್ಲಿ ಅಪರಾಧಗಳನ್ನು ತಡೆಯುವ ಉದ್ದೇಶದ ‘ಮೊಬೈಲ್ ಸ್ಕ್ವಾಡ್’ನ ಭಾಗವಾಗಿದ್ದರು.

ಪ್ರಕರಣ ಏನು?:

2002ರ ಫೆಬ್ರುವರಿ 27ರಂದು ದಾಹೋದ್ ಮತ್ತು ಅಹಮದಾಬಾದ್ ಮಧ್ಯೆ ಸಂಚರಿಸುವ ಸಾಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಎಂದಿನಂತೆ ರೈಲು ತಡವಾಗಿ ಬರಲಿದೆ ಎಂದು ಭಾವಿಸಿ ಅವರು ಮುಂಚೆಯೇ ಹೋಗಿದ್ದರು. ಆದರೆ ಗೋಧ್ರಾ ರೈಲು ನಿಲ್ದಾಣದ ಸಮೀಪ ರೈಲಿನ ಒಂದು ಭೋಗಿಗೆ ಬೆಂಕಿ ಹಚ್ಚಲಾಯಿತು. ಮರುದಿನ ರಾಜ್ಯದಾದ್ಯಂತ ಕೋಮುಗಲಭೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.