ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಬುಕೇಶ್ವರ ದೇವಾಲಯದಲ್ಲಿ ಹಳೆ ಕಾಲದ ಚಿನ್ನದ ನಾಣ್ಯ ಪತ್ತೆ

Last Updated 27 ಫೆಬ್ರುವರಿ 2020, 8:24 IST
ಅಕ್ಷರ ಗಾತ್ರ

ತಮಿಳುನಾಡು: ತಿರುಚಿರಾಪಳ್ಳಿ ಜಂಬುಕೇಶ್ವರ ದೇವಾಲಯದಲ್ಲಿ ನೆಲ ಅಗೆಯುತ್ತಿದ್ದಾಗ 505 ಚಿನ್ನದ ನಾಣ್ಯಗಳು ದೊರೆತಿವೆ.
ಬುಧವಾರ ಇಲ್ಲಿನ ತಿರುವನೈಕಾವಲ್ ಜಂಬುಕೇಶ್ವರ ದೇವಸ್ಥಾನದಲ್ಲಿ ಈ ನಾಣ್ಯಗಳು ದೊರೆತಿದ್ದು 1.716 ತೂಕ ಹೊಂದಿವೆ.

ಇವುಗಳ ಮಾರುಕಟ್ಟೆ ಬೆಲೆ ₹68 ಲಕ್ಷ ಎಂದು ಅಂದಾಜಿಸಲಾಗಿದೆ. ಆಡಳಿತ ಮಂಡಳಿ ಜೀರ್ಣೋದ್ಧಾರ ಕೆಲಸ ಆರಂಭಿಸಿದಾಗ ಪಾತ್ರೆಯೊಂದರಲ್ಲಿ ಸಣ್ಣ ಸಣ್ಣ ಗಾತ್ರದ ನಾಣ್ಯಗಳು ಇರುವುದು ಕಂಡು ಬಂತು. ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT