ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದಲ್ಲಿ ಮತ್ತೊಂದು ರೈಲು ದುರಂತ: ಗೂಡ್ಸ್ ರೈಲಿಗೆ ಸಿಲುಕಿ 6 ಕಾರ್ಮಿಕರು ಸಾವು!

ಬಾಲೇಶ್ವರ ರೈಲು ದುರಂತದ ಸನಿಹವೇ ಘಟನೆ– ಒಡಿಶಾದ ಜಾಜ್‌ಪುರ್‌ ಜಿಲ್ಲೆಯ ಜಾಜ್‌ಪುರ್‌ ಕಿಯೋಂಜಾರ್‌ ರಸ್ತೆ ರೈಲು ನಿಲ್ದಾಣದ ಬಳಿ ಘಟನೆ
Published 7 ಜೂನ್ 2023, 13:51 IST
Last Updated 7 ಜೂನ್ 2023, 13:51 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದಲ್ಲಿ ಕಳೆದ ಶುಕ್ರವಾರ ನಡೆದಿದ್ದ ಭೀಕರ ತ್ರಿವಳಿ ರೈಲು ದುರಂತದ ಘಟನಾ ಸ್ಥಳದ ಸನಿಹವೇ ಮತ್ತೊಂದು ರೈಲು ದುರಂತ ಇಂದು ಸಂಭವಿಸಿದೆ.

ಸರಕು ಸಾಗಣೆ ರೈಲೊಂದು ಹರಿದು 6 ಕಾರ್ಮಿಕರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಒಡಿಶಾದ ಜಾಜ್‌ಪುರ್‌ ಜಿಲ್ಲೆಯ ಜಾಜ್‌ಪುರ್‌ ಕಿಯೋಂಜಾರ್‌ ರಸ್ತೆ ರೈಲು ನಿಲ್ದಾಣದ ಬಳಿ ನಡೆದಿದೆ.

ದಿಢೀರ್‌ನೇ ಗುಡುಗು–ಮಿಂಚು ಸಹಿತ ಮಳೆ ಪ್ರಾರಂಭವಾಗಿದ್ದರಿಂದ ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಆಶ್ರಯ ಪಡೆಯಲು ಸರಕು ಸಾಗಣೆ ರೈಲಿನ ಕೆಳಗೆ ನಿಂತಿದ್ದರು. ಈ ವೇಳೆ ರೈಲು ಚಲಿಸಿದ್ದರಿಂದ ಕೆಳಗೆ ಸಿಲುಕಿ 6 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಆ ಭಾಗದ ಹಿರಿಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಮೃತ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಬಾಲೇಶ್ವರ ರೈಲು ದುರಂತದಲ್ಲಿ ಕನಿಷ್ಠ 288 ಜನ ಮೃತಪಟ್ಟು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT