ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದೇವ್ ಆ್ಯಪ್: ಬ್ಲಾಕ್ ಮಾಡಲು ಇ.ಡಿ ಆದೇಶ

Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಬೆಟ್ಟಿಂಗ್‌ ನಡೆಸಲು ಅವಕಾಶ ಕಲ್ಪಿಸುವ 22 ಅಕ್ರಮ ವೇದಿಕೆಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರವು ಭಾನುವಾರ ಆದೇಶಿಸಿದೆ. ಇದರಲ್ಲಿ ಮಹಾದೇವ್ ಆ್ಯಪ್ ಕೂಡ ಸೇರಿದೆ. ಜಾರಿ ನಿರ್ದೇಶನಾಲಯದ (ಇ.ಡಿ.) ಮನವಿ ಆಧರಿಸಿ ಈ ಆದೇಶ ಹೊರಡಿಸಲಾಗಿದೆ.

ಈ ವೇದಿಕೆಗಳನ್ನು ಬ್ಲಾಕ್‌ ಮಾಡುವಂತೆ ಛತ್ತೀಸಗಢ ಸರ್ಕಾರವು ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ. 

ಬೆಟ್ಟಿಂಗ್‌ಗೆ ಬಳಸುತ್ತಿದ್ದ ಅಕ್ರಮ ಆ್ಯಪ್‌ ಜಾಲದ ವಿರುದ್ಧ ಇ.ಡಿ. ನಡೆಸಿದ ತನಿಖೆ ಹಾಗೂ ನಂತರ ಛತ್ತೀಸಗಢದಲ್ಲಿ ಮಹಾದೇವ್ ಬುಕ್ ಮೇಲೆ ನಡೆಸಿದ ದಾಳಿಯ ನಂತರದಲ್ಲಿ ಈ ಆದೇಶ ಹೊರಬಿದ್ದಿದೆ.

‘ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ವೆಬ್‌ಸೈಟ್‌ ಅಥವಾ ಆ್ಯಪ್‌ ಸ್ಥಗಿತಕ್ಕೆ ಆದೇಶಿಸುವ ಅಧಿಕಾರವು ಛತ್ತೀಸಗಢ ಸರ್ಕಾರಕ್ಕೆ ಇದೆ. ಆದರೆ ಅವರು ಆ ಕೆಲಸ ಮಾಡಿಲ್ಲ. ಸ್ಥಗಿತಗೊಳಿಸುವಂತೆ ಮನವಿಯನ್ನೂ ಮಾಡಿಲ್ಲ. ಮೊದಲ ಬಾರಿಗೆ ಮನವಿ ಬಂದಿದ್ದು ಇ.ಡಿ. ಕಡೆಯಿಂದ. ಇದೇ ಮಾದರಿಯಲ್ಲಿ ಮನವಿ ಸಲ್ಲಿಸಲು ಇ.ಡಿ.ಗೆ ಯಾವ ಅಡೆತಡೆಯೂ ಇರಲಿಲ್ಲ’ ಎಂದು ಚಂದ್ರಶೇಖರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT