ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ದುರ್ಬಳಕೆ ತಡೆಯಲು ಮತ್ತು ‘ಡೀಪ್ಫೇಕ್’ಗಳನ್ನು ನಿಯಂತ್ರಿಸಲು ಸರ್ಕಾರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮದಲ್ಲಿ ಬದಲಾವಣೆ ತರುವುದಾಗಿ ಹೇಳಿದೆ.

‘ಎಐ’ ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಹರಡುವುದು ಹೆಚ್ಚುತ್ತಿದ್ದು, ಜನರನ್ನು ದಾರಿ ತಪ್ಪಿಸಲು, ಚುನಾವಣಾ ಅಕ್ರಮಗಳಿಗೆ, ಹಣಕಾಸು ವಂಚನೆಗಳಿಗೆ ಎಐ ದುರ್ಬಳಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಐಟಿ ನಿಯಮಗಳನ್ನು ಬಿಗಿಗೊಳಿಸುತ್ತಿರುವುದಾಗಿ ಸಚಿವಾಲಯ ಹೇಳಿದೆ.

ಪ್ರಸ್ತಾವಿತ ಐಟಿ ನಿಯಮದಲ್ಲಿ ಯೂಟ್ಯೂಬ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎಐ ಆಧಾರಿತ ಕಂಟೆಂಟ್ಗಳನ್ನು ಗುರುತಿಸಲು ಲೇಬಲಿಂಗ್ ಕಡ್ಡಾಯಗೊಳಿಸಲಾಗಿದೆ. ಈ ನಿಯಮವು ಜಾಲತಾಣದಲ್ಲಿ ಡೀಪ್ಫೇಕ್ ವಿಡಿಯೊ, ತಿದ್ದುಪಡಿ ಮಾಡಿದ ಚಿತ್ರ, ಧ್ವನಿಯನ್ನು ಪತ್ತೆಹಚ್ಚಲೂ ನೆರವಾಗಲಿದೆ. ಕರಡು ಪ್ರಸ್ತಾವಕ್ಕೆ ಆಕ್ಷೇಪಗಳಿದ್ದಲ್ಲಿ ನವೆಂಬರ್ 6ರೊಳಗೆ ದಾಖಲಿಸುವಂತೆ ಸಚಿವಾಲಯವು ಸಾಮಾಜಿಕ ಜಾಲತಾಣ, ಎಐ ಕಂಟೆಂಟ್ ಸೃಷ್ಟಿಸುವ ಸಂಸ್ಥೆಗಳಿಗೆ ಸೂಚಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರಿಗೆ ತಾವು ನೋಡುತ್ತಿರುವ ವಿಷಯ ಸತ್ಯವೋ, ಸುಳ್ಳೋ ಎನ್ನುವುದು ‘ಎಐ’ ಲೇಬಲಿಂಗ್ ಕಡ್ಡಾಯಗೊಳಿಸುವುದರಿಂದ ಸಾಧ್ಯವಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.