ಲಿಂಬ್ಡಿ, ಅಬ್ಡಾಸ, ಕಪ್ರಾದ, ಡಂಗ್, ಕರ್ಜನ್ ಕ್ಷೇತ್ರದಲ್ಲಿ ಬಿಜೆಪಿಯು ಕಾಂಗ್ರೆಸ್ನಿಂದ ಗಮನಾರ್ಹ ಮತಗಳ ಅಂತರದಿಂದ ಮುಂದಿದೆ. ಮತ ಎಣಿಕೆ ಆರಂಭದಲ್ಲಿ ಮೊರ್ಬಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಜಯಂತಿಲಾಲ್ ಪಟೇಲ್ ಅವರನ್ನು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಮಿರ್ಜಾ ಅವರು 1,000 ಮತಗಳ ಅಂತರದಿಂದ ಹಿಂದಿಕ್ಕಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳ ಮೂಲಕ ತಿಳಿದು ಬಂದಿದೆ.