ಅಹಮದಾಬಾದ್: ಮದ್ಯ ವ್ಯಸನಿಗಳಿಂದ ಗ್ರಾಮವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಪಂಛಾ ಗ್ರಾಮದ ಜನರು ವಿಚಿತ್ರ ಕ್ರಮವನ್ನು ಅನುಸರಿಸುತ್ತಿದ್ದಾರೆ. ಮದ್ಯ ವ್ಯಸನಿಗಳಿಗಾಗಿ ಬೋನೊಂದನ್ನು ತಯಾರಿಸಿ ಇಟ್ಟಿದ್ದಾರೆ. ಇದೀಗ ಎಲ್ಲರ ಗಮನಸೆಳೆದಿದೆ.

ಯಾರಾದರೂ ಮದ್ಯ ಸೇವಿಸಿರುವುದು ಅಥವಾ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಂಡುಬಂದರೆ ಅವರನ್ನು ಪೊಲೀಸರಿಗೆ ಒಪ್ಪಿಸುವ ಮೊದಲು ಗ್ರಾಮದ ಮುಂದೆ ಇರಿಸಲಾಗಿರುವ ಬೋನಿನಲ್ಲಿ ಕೂಡಿಹಾಕಲು ನಿರ್ಧರಿಸಿದ್ದಾರೆ.

2025ರ ಡಿಸೆಂಬರ್ 16ರಂದು ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಬೋನು ಇಡಲು ನಿರ್ಧರಿಸಿದ್ದರು. ಅದರಂತೆ ಊರಿನ ಮುಂದೆಯೇ ಬೋನು ಇಡಲಾಗಿದೆ. ಈ ಕ್ರಮ ಕೈಗೊಂಡ ಬಳಿಕ ಗ್ರಾಮದಲ್ಲಿ ಮದ್ಯ ವ್ಯಸನಕ್ಕೆ ಸಂಬಂಧಿಸಿದ ಅಹಿತಕರ ಘಟನೆ ನಡೆದಿಲ್ಲ ಎಂದು ಗ್ರಾಮದ ಸರಪಂಚ್ ಆಗಿರುವ ಶಾಂತಬೆನ್ ಅವರ ಪತಿ ಕಪಿಲ್ ಚೌಧರಿ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.