ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಡೋದರ: ರಾಮ ನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ

Last Updated 30 ಮಾರ್ಚ್ 2023, 13:28 IST
ಅಕ್ಷರ ಗಾತ್ರ

ವಡೋದರ, ಗುಜರಾತ್: ನಗರದ ಫತೇಹಪುರ ಪ್ರದೇಶದಲ್ಲಿ ಗುರುವಾರ ರಾಮ ನವಮಿ ಉತ್ಸವದ ಅಂಗವಾಗಿ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ಕಲ್ಲುಗಳನ್ನು ತೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಕೆಲ ವಾಹನಗಳು ಜಖಂಗೊಂಡಿದ್ದು, ಯಾರಿಗೂ ಗಾಯಗಳಾದ ವರದಿಗಳಿಲ್ಲ. ಪೂರ್ವನಿಗದಿತ ಮಾರ್ಗದ ಮೂಲಕವೇ ಶೋಭಾಯಾತ್ರೆ ಸಾಗಿದ್ದು, ಪೊಲೀಸ್‌ ರಕ್ಷಣೆ ಒದಗಿಸಲಾಗಿತ್ತು ಎಂದು ಡಿಸಿಪಿ ಯಶಪಾಲ್ ಜಗನಿಯಾ ತಿಳಿಸಿದ್ದಾರೆ.

‘ಈ ಹಿಂದೆ ಇಂಥ ಘಟನೆಗಳು ಸಂಭವಿಸಿದ್ದವು. ಈ ಬಗ್ಗೆ ಗೊತ್ತಿದ್ದರೂ, ಶೋಭಾಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲಿ ಕಾಣಿಸುತ್ತಿರಲಿಲ್ಲ’ ಎಂದು ಬಜರಂಗದಳ ಮುಖಂಡರೊಬ್ಬರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT