ಬೆಂಗಳೂರು: ಪೋಕ್ಸೋ ಪ್ರಕರಣದ ಅಡಿ ಖ್ಯಾತ ಟಿ.ವಿ ನಿರೂಪಕಿ ಚಿತ್ರಾ ತ್ರಿಪಾಠಿ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಗುರುಗ್ರಾಮ ನ್ಯಾಯಾಲಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

ಇದರಿಂದ ಚಿತ್ರಾ ತ್ರಿಪಾಠಿ ಬಂಧನದ ಭೀತಿ ಎದುರಿಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ವೆಬ್ಸೈಟ್ ವರದಿ ಮಾಡಿದೆ.

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಫೋಟೊ ಮತ್ತು ವಿಡಿಯೊಗಳನ್ನು ಟಿ.ವಿಯಲ್ಲಿ ಭಿತ್ತರಿಸಿರುವ ಗಂಭೀರ ಆರೋಪ ಚಿತ್ರಾ ಮೇಲಿದೆ.

ಈ ಪ್ರಕರಣದಲ್ಲಿ ಚಿತ್ರಾ ತ್ರಿಪಾಠಿ ಸೇರಿದಂತೆ ಇತರ ಏಳು ಜನರ ಮೇಲೆ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗಿದೆ. ಚಿತ್ರಾ ತ್ರಿಪಾಠಿ ನವೆಂಬರ್ 14ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಆಗಿರಲಿಲ್ಲ.

ಈ ಬಗ್ಗೆ ಗರಂ ಆಗಿರುವ ನ್ಯಾಯಾಧೀಶರು, ನ್ಯಾಯಾಲಯದ ಕಾರ್ಯಚಟುವಟಿಕೆಗಳನ್ನು ಹಗುರವಾಗಿ ಪರಿಗಣಿಸಿರುವ ಸುದ್ದಿ ನಿರೂಪಕಿ ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂದು ಎಚ್ಚರಿಸಿದೆ. ಚಿತ್ರಾ ಅವರ ವಕೀಲರ ಮನವಿಗಳನ್ನು ತಳ್ಳಿ ಹಾಕಿದೆ.

ಸದ್ಯ ಚಿತ್ರಾ ಅವರು ಹಿಂದಿಯ ಎಬಿಪಿನ್ಯೂಸ್ ಲೈವ್ ವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿದ್ದಾರೆ.
.ಕ್ರಿಕೆಟಿಗ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ಟಾಲಿವುಡ್ಗೆ ಎಂಟ್ರಿ?.ಬೇಹುಗಾರಿಕೆ ಆರೋಪ: ಚೀನಾದ ಪತ್ರಕರ್ತನಿಗೆ ಏಳು ವರ್ಷ ಜೈಲು ಶಿಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.