ಬೆಂಗಳೂರು: ಖ್ಯಾತ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರ ಪತ್ನಿ, ಡ್ಯಾನ್ಸರ್ ಧನಶ್ರೀ ವರ್ಮಾ ಅವರು ಟಾಲಿವುಡ್ ಚಿತ್ರರಂಗ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ನಿರ್ಮಾಣ ಹಂತದಲ್ಲಿರುವ ‘ಆಕಾಶಂ ದಾಟಿ ವಸ್ತಾವಾ’ ಎಂಬ ತೆಲುಗು ಸಿನಿಮಾದಲ್ಲಿ ಧನಶ್ರೀ ವರ್ಮಾ ನಟಿಸುತ್ತಿದ್ದಾರೆ ಎಂದು ಇಂಡಿಯಾ ಗ್ಲಿಟ್ಜ್ ವೆಬ್ಸೈಟ್ ವರದಿ ಮಾಡಿದೆ.

ರೊಮ್ಯಾಂಟಿಂಕ್ ಮ್ಯುಸಿಕಲ್ ಡ್ರಾಮಾ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ಶಶಿ ಕುಮಾರ್ ಮುತ್ತಲೂರಿ ಎನ್ನುವರು ನಿರ್ದೇಶಿಸುತ್ತಿದ್ದಾರೆ. ದಿಲ್ ರಾಜು ಅವರ ನಿರ್ಮಾಣ ಸಂಸ್ಥೆಯಿಂದ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಈ ಚಿತ್ರದಲ್ಲಿ ಧನಶ್ರೀ ಅವರು ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಭಾಗದ ಚಿತ್ರೀಕರಣ ಮುಂಬೈನಲ್ಲಿ ನಡೆದಿದೆ ಎಂದು ವರದಿ ಮಾಡಿದೆ. ಆದರೆ ಚಿತ್ರತಂಡ ಈ ಮಾಹಿತಿಯನ್ನು ಇನ್ನೂ ಖಚಿತಪಡಿಸಿಲ್ಲ.

ನೃತ್ಯಪಟು ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಆಗಿರುವ ಧನಶ್ರೀ ವರ್ಮಾ ಅವರು 2020 ರಲ್ಲಿ ಕ್ರಿಕೆಟಿಗ ಟೀಂ ಇಂಡಿಯಾದ ಬೌಲರ್ ಯಜುವೇಂದ್ರ ಚಾಹಲ್ ಅವರನ್ನು ಮದುವೆಯಾಗಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಅವರಿಗೆ 6.2 ಮಿಲಿಯನ್ ಫಾಲೋವರ್ಸ್ ಇದ್ದಾರೆ.
.ಚಲಿಸುತ್ತಿದ್ದ ‘108 ಆಂಬುಲೆನ್ಸ್’ನಲ್ಲಿ 16ರ ಬಾಲಕಿ ಮೇಲೆ ಅತ್ಯಾಚಾರ.ನವಜಾತ ಶಿಶುಗಳ, ಬಾಣಂತಿಯರ ಸಾವು: ಆರೋಗ್ಯ ಸಚಿವರನ್ನು ಗುರಿಯಾಗಿಸಿ ಬಿಜೆಪಿ ಟೀಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.