ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡನೇ ಮಗುವಿನ ಜನನ ಸಂಬಂಧ ಪಂಜಾಬ್‌ ಸರ್ಕಾರದಿಂದ ಕಿರುಕುಳ– ಮೂಸೆವಾಲಾ ತಂದೆ

Published 20 ಮಾರ್ಚ್ 2024, 23:00 IST
Last Updated 20 ಮಾರ್ಚ್ 2024, 23:00 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ತಂದೆ ಬಲಕೌರ್‌ ಸಿಂಗ್‌ ಅವರು, ತಮ್ಮ ಎರಡನೇ ಮಗನ ಜನನಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಸಿಂಗ್‌ ಮತ್ತು ಅವರ ಪತ್ನಿ ಚರಣ್‌ ಕೌರ್‌ ಅವರಿಗೆ ಮಾರ್ಚ್ 17ರಂದು ಗಂಡು ಮಗು ಜನಿಸಿತ್ತು. ಅವರು ಐವಿಎಫ್‌ ನೆರವಿನಿಂದ ಎರಡನೇ ಮಗು ಪಡೆದಿದ್ದಾರೆ. ಗಾಯಕ ಸಿಧು ಅವರು ಎರಡು ವರ್ಷಗಳ ಹಿಂದೆ ಹಂತಕರ ಗುಂಡಿಗೆ ಬಲಿಯಾಗಿದ್ದರು.

‘ಮಗು ಕಾನೂನುಬದ್ಧವಾಗಿದೆ ಎಂಬುದನ್ನು ಸಾಬೀತುಪಡಿಸುವಂತೆ ಪಂಜಾಬ್‌ ಸರ್ಕಾರ ಕೇಳುತ್ತಿದೆ. ಈ ಕುರಿತು ಬೆಳಿಗ್ಗೆಯಿಂದ ನನಗೆ ಕಿರುಕುಳ ನೀಡಲಾಗುತ್ತಿದೆ. ಮಗುವಿನ ದಾಖಲೆಗಳನ್ನು ಒದಗಿಸುವಂತೆ ಕೇಳುತ್ತಿದೆ’ ಎಂದು ಆರೋಪಿಸಿ ಅವರು ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವರದಿ ಕೇಳಿದ ಕೇಂದ್ರ: 58ನೇ ವಯಸ್ಸಿನಲ್ಲಿ ಚರಣ್‌ ಕೌರ್‌ ಅವರು ಐವಿಎಫ್‌ ಚಿಕಿತ್ಸೆ ಪಡೆದಿರುವ ಕುರಿತ ಮಾಧ್ಯಮ ವರದಿಯನ್ನು ಉಲ್ಲೇಖಿಸಿ, ಕೇಂದ್ರ ಆರೋಗ್ಯ ಸಚಿವಾಲಯವು ಪಂಜಾಬ್‌ ಸರ್ಕಾರಕ್ಕೆ ಪತ್ರ ಬರದು ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದೆ. 

‘ಅಸಿಸ್ಟೆಡ್‌ ರಿಪ್ರೊಡಕ್ಟಿವ್‌ ಟೆಕ್ನಾಲಜಿ (ರೆಗ್ಯುಲೇಷನ್‌) ಕಾಯ್ದೆ –2021’ರ ಪ್ರಕಾರ ಮಹಿಳೆಗೆ ನಿಗದಿಪಡಿಸಲಾದ ವಯಸ್ಸಿನ ಮಿತಿಯು 21ರಿಂದ 50 ವರ್ಷಗಳ ನಡುವೆ ಇರಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ. ಬಲಕೌರ್‌ ಅವರಿಗೆ 60 ಮತ್ತು ಚರಣ್‌ ಕೌರ್‌ ಅವರಿಗೆ 58 ವರ್ಷಗಳಾಗಿವೆ. 

ಮೂಸೆವಾಲಾ ಅವರ ತಂದೆ ಮಾಡಿದ ಆರೋಪಗಳ ಬಗ್ಗೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ಅಮರಿಂದರ್ ಸಿಂಗ್‌ ರಾಜಾ ವಾರಿಂಗ್‌ ಮತ್ತು ಶಿರೋಮಣಿ ಅಕಾಲಿದಾಳದ ನಾಯಕ ಬಿಕ್ರಮ್‌ ಸಿಂಗ್ ಮಜಿಥಿಯಾ ಅವರು ಪಂಜಾಬ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT