ಚಂಡೀಗಢ: ಹರಿಯಾಣ ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಗಮನಾರ್ಹ ಸುಧಾರಣೆ ಕಂಡಿದ್ದು, 2025ರಲ್ಲಿ ಈ ಪ್ರಮಾಣ 923ಕ್ಕೆ ಏರಿಕೆಯಾಗಿದೆ. ಇದು ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಏರಿಕೆ ಕಂಡಿದೆ.

2024ರಲ್ಲಿ ಲಿಂಗಾನುಪಾತ ಪ್ರಮಾಣ 1000 ಪುರುಷರಿಗೆ 910 ಮಹಿಳೆಯರಿದ್ದರು. 2025ರಲ್ಲಿ ಮಹಿಳೆಯರ ಪ್ರಮಾಣ 1000 ಪುರುಷರಿಗೆ 923ಕ್ಕೆ ಏರಿದೆ. ಒಂದು ವರ್ಷದಲ್ಲಿ ಅನುಪಾತದ ಪ್ರಮಾಣದಲ್ಲಿ 13 ಅಂಶಗಳಷ್ಟು ಜಿಗಿತಕಂಡಿದೆ. ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಅಕ್ರಮ ಗರ್ಭಪಾತಗಳ ತಡೆಗಾಗಿ ಸರ್ಕಾರ ಕೈಗೊಂಡ ಕ್ರಮಗಳು, ಅನುಪಾತ ಹೆಚ್ಚಳಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

2025 ರಲ್ಲಿ 5,19,691 ಜನನ ಪ್ರಮಾಣ ದಾಖಲಾಗಿದೆ. ಇದರಲ್ಲಿ 2,70,281 ಬಾಲಕರು ಮತ್ತು 2,49,410 ಬಾಲಕಿಯರು ಜನಿಸಿದ್ದಾರೆ. 2024 ರಲ್ಲಿ 5,16,402 ಜನನ ಪ್ರಮಾಣ ದಾಖಲಾಗಿದೆ. ಇದರಲ್ಲಿ 2,46,048 ಬಾಲಕಿಯರು ಜನಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.