ರಾಮ್‌ಪುರ: 2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಜಯಪ್ರದಾ ಅವರಿಗೆ ಉತ್ತರ ಪ್ರದೇಶ ಜಿಲ್ಲಾ ನ್ಯಾಯಾಲಯ ಇದೇ 17ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.
ಜಯಪ್ರದಾ ಅವರಿಗೆ ಜಾಮೀನು ರಹಿತ ವಾರೆಂಟ್ ನೀಡಿದ್ದರೂ, ನವೆಂಬರ್ 8ರಂದು ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ತನಿಖಾಧಿಕಾರಿ ಅಮರನಾಥ್ ತಿವಾರಿ ತಿಳಿಸಿದ್ದಾರೆ.
2019ರ ಚುನಾವಣಾ ಪ್ರಚಾರದ ವೇಳೆ ಜಯಪ್ರದಾ ಅವರ ವಿರುದ್ಧ ಸ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಈವರೆಗೂ ಪ್ರಕರಣ ಇತ್ಯರ್ಥವಾಗದೆ ರಾಮ್‌ಪುರ ಎಂಪಿ–ಎಲ್‌ಎ ನ್ಯಾಯಾಲಯದಲ್ಲಿ ಬಾಕಿ ಉಳಿದುಕೊಂಡಿದೆ.