ಜೈಪುರ: ರಾಜಸ್ಥಾನದ ದೌಸಾ ಮತ್ತು ಭರತ್‌ಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
ದೌಸಾದ ಮಹುವಾ ಪ್ರದೇಶದಲ್ಲಿ ಗರಿಷ್ಠ 195 ಸೆಂ.ಮೀ. ದಾಖಲೆ ಮಳೆಯಾಗಿದ್ದು, ಭರತ್‌ಪುರದ ನಾಡಬಯ್‌ಯಲ್ಲಿ 160 ಸೆಂ.ಮೀ, ಬೈಜ್‌ಪುರದಲ್ಲಿ 123 ಸೆಂ.ಮೀ ಮತ್ತು ಬಯಾನಾದಲ್ಲಿ 113 ಸೆಂ.ಮೀ ಮಳೆ ದಾಖಲಾಗಿದೆ.
ಜೈಪುರದ ವಿರಾಟನಗರದಲ್ಲಿ 114 ಸೆಂ.ಮೀ. ಮಳೆ ದಾಖಲಾಗಿದ್ದು, ಥಾನಾಗಾಜಿ ಮತ್ತು ಮುಂಡಾವರದಲ್ಲಿ ಕ್ರಮವಾಗಿ 106 ಮತ್ತು 63 ಸೆಂ.ಮೀ. ಮಳೆಯಾಗಿದೆ.
ಮುಂದಿನ ಐದರಿಂದ ಏಳು ದಿನಗಳ ವರೆಗೆ ಪೂರ್ವ ರಾಜಸ್ಥಾನದ ಕೆಲ ಭಾಗಗಳಲ್ಲಿ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.