ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಭಾರಿ ಮಳೆಯಾಗಿದ್ದು, ನಗರದ ಮಿಂಟೋ ಸೇತುವೆ, ಮೂಲ್‌ಚಂದ್ ಅಂಡರ್‌ಪಾಸ್ ಮತ್ತು ಐಟಿಒ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ನೀರು ನಿಂತಿದೆ.

ಹವಾಮಾನ ಇಲಾಖೆಯುದೆಹಲಿಗೆ ‘ಯಲ್ಲೋ ಅಲರ್ಟ್’ ಕೊಟ್ಟಿದ್ದು,ಮುಂದಿನ ಕೆಲ ದಿನಗಳ ವರೆಗೆ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಮುನ್ನೆಚ್ಚರಿಕೆನೀಡಿದೆ.

ದೆಹಲಿಯ ಹಲವು ಭಾಗ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಿರ್ಣಾಯಕ ಅಂಡರ್‌ಪಾಸ್‌ಗಳಲ್ಲಿ ಸಂಚಾರ ನಿರ್ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡಿದ್ದಾರೆ.

ಜಲಾವೃತವಾಗಿರುವ ಪ್ರದೇಶಗಳ ಸಮಸ್ಯೆ, ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

ಭಾರಿ ಮಳೆಯಿಂದಾಗಿ ಪುಲ್ ಪ್ರಹ್ಲಾದಪುರ ಅಂಡರ್‌ಪಾಸ್, ಲಜಪತ್ ನಗರ, ಜಂಗಪುರ, ಐಟಿಒ, ಪ್ರಗತಿ ಮೈದಾನದ ಸುತ್ತಲಿನ ರಸ್ತೆಗಳು, ಸಂಗಮ್ ವಿಹಾರ್, ರೋಹ್ಟಕ್ ರಸ್ತೆ, ಮಂಗೋಲ್‌ಪುರಿ, ಕಿರರಿ ಮತ್ತು ಮಾಳವೀಯ ನಗರಗಳಲ್ಲಿ ನೀರು ನಿಂತಿದೆ.

ದಕ್ಷಿಣ ದೆಹಲಿಯ ಮೆಹ್ರೌಲಿ-ಬದರಪುರ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.