ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮ ಹೆಸರಿಗೆ ಬರೆದಿದ್ದ 1 ಎಕರೆ ಜಮೀನನ್ನು ಪರಿಹಾರ ನಿಧಿಗೆ ನೀಡಿದ ರೈತನ ಮಕ್ಕಳು

Last Updated 20 ಆಗಸ್ಟ್ 2018, 8:49 IST
ಅಕ್ಷರ ಗಾತ್ರ

ಪಯ್ಯನ್ನೂರ್ (ಕಣ್ಣೂರು): 'ಸರ್, ಅಳಿಲು ಸೇವೆ ಎಂಬುದೊಂದು ಇದೆಯಲ್ಲಾ. ನಮ್ಮ ರಾಜ್ಯದ ಈ ಪರಿಸ್ಥಿತಿಯನ್ನು ನೋಡಿ ಈ ಶಾಲೆಯ ವಿದ್ಯಾರ್ಥಿನಿಯಾದ ನಾನು ಮತ್ತು ನನ್ನ ತಮ್ಮ ಬ್ರಹ್ಮಇಬ್ಬರೂ ಸೇರಿ ನಮ್ಮ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಚಿಕ್ಕ ದೇಣಿಗೆಯೊಂದನ್ನು ನೀಡಬಯಸುತ್ತೇವೆ.

ರೈತನಾಗಿರುವ ನಮ್ಮ ಅಪ್ಪ ನಮ್ಮ ಭವಿಷ್ಯಕ್ಕಾಗಿ ನೀಡಿದ್ದ ಆಸ್ತಿಯಿಂದ ಒಂದು ಎಕರೆ ಜಮೀನನ್ನು ನಾವು ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದೇವೆ. ಅಪ್ಪನ ಅನುಮತಿಯನ್ನೂ ಪಡೆದಿದ್ದೇವೆ.ಇನ್ನು ನಾವೇನು ಮಾಡಬೇಕು?'
ಇಂತೀ,
ಸ್ವಾಹ ಮತ್ತು ಬ್ರಹ್ಮ
ಒಂಭತ್ತನೇ ತರಗತಿ

ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರು ನಿವಾಸಿ, ಶೆಣೈ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯ ಪತ್ರ ಇದು. ನೆರೆ ಪೀಡಿತರಿಗೆ ತಮ್ಮಿಂದಾದ ಸಹಾಯವನ್ನು ನೀಡಲು ಮುಂದೆ ಬಂದಿರುವ ಈ ವಿದ್ಯಾರ್ಥಿನಿಯ ನಿರ್ಧಾರಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT