ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ಯಾನ್‌ ಸ್ವಾಮಿಯಂತೇ ಹೇಮಂತ್‌ ಸೊರೇನ್‌ ಮೇಲೆ ದಬ್ಬಾಳಿಕೆ:ಫೇಸ್‌ಬುಕ್‌ ಪೋಸ್ಟ್‌

Published 7 ಜೂನ್ 2024, 14:47 IST
Last Updated 7 ಜೂನ್ 2024, 14:47 IST
ಅಕ್ಷರ ಗಾತ್ರ

ರಾಂಚಿ: ಬುಡಕಟ್ಟು ಜನಾಂಗದ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಮಡಿಪಾಗಿಟ್ಟು, ಜೈಲಿನಲ್ಲಿದ್ದಾಗಲೇ ಮೃತಪಟ್ಟ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್‌ ಸ್ವಾಮಿ ಅವರು ಎದುರಿಸಿದ ರೀತಿಯ ದಬ್ಬಾಳಿಕೆಯನ್ನೇ, ಜೈಲಿನಲ್ಲಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಎದುರಿಸುತ್ತಿದ್ದಾರೆ ಎಂಬುದಾಗಿ ಅವರ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶಗಳು, ಸ್ಟ್ಯಾನ್‌ ಸ್ವಾಮಿ ಅವರ ಸಾವಿಗೆ ಜಾರ್ಖಂಡ್‌ನ ಪ್ರತೀಕಾರದ ಆರಂಭವನ್ನು ಸೂಚಿಸುತ್ತವೆ ಎಂದು ಸೊರೇನ್‌ ಅವರ ಖಾತೆ ನಿರ್ವಹಿಸುತ್ತಿರುವ ಅವರ ಪತ್ನಿ ಕಲ್ಪನಾ ಸೊರೇನ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರು ಅತ್ಯಂತ ದುರ್ಬಲ ವರ್ಗದವರ ಪರ ಧ್ವನಿ ಎತ್ತಿದ್ದರು. ಅವರನ್ನು ಸಾಂಸ್ಥಿಕ ನಿರ್ಲಕ್ಷ್ಯ ಮತ್ತು ಅನ್ಯಾಯದಿಂದ ಮೌನವಾಗಿಸಿದಂತೆಯೇ, ಇಂದು ಹೇಮಂತ್‌ ಸೊರೇನ್‌ ಅವರ ಮೇಲೆಯೂ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದನ್ನು ವಿರೋಧಿಸಿ ಜಾರ್ಖಂಡ್‌ನ ಜನರು ಹೇಮಂತ್‌ ಅವರ ಬೆಂಬಲಕ್ಕೆ ಬಲವಾಗಿ ನಿಲ್ಲಬೇಕಿದೆ. ಇಲ್ಲದಿದ್ದರೆ ಜಾರ್ಖಂಡ್‌ ಅನ್ನು ಮಣಿಪುರವಾಗಿ ಬದಲಾಯಿಸುವುದನ್ನು ಯಾರಿಂದಲೂ ತಡೆಯಲಾಗದು’ ಎಂದು ಅವರು ತಿಳಿಸಿದ್ದಾರೆ. 

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್‌ ಸೊರೇನ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT